ಮೊಹಾಲಿ: ದ.ಆಫ್ರಿಕಾ ವಿರುದ್ಧ ದ್ವಿತೀಯ ಟಿ20 ಪಂದ್ಯವಾಡಲು ಚಂಡೀಘಡಕ್ಕೆ ಬಂದಿಳಿದಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಭದ್ರತೆ ಒದಗಿಸಲು ಸ್ಥಳೀಯ ಪೊಲೀಸರು ನಿರಾಕರಿಸಿದ್ದಾರೆ.
ಚಂಢೀಘಡ ಪೊಲೀಸರು ಕ್ರಿಕೆಟಿಗರ ಭದ್ರತೆ ಹೊಣೆ ಹೊತ್ತುಕೊಳ್ಳದೇ ಇರಲು ನಿರ್ಧರಿಸಿದ್ದಾರೆ. ಇದಕ್ಕೆ ಕಾರಣ ಬಿಸಿಸಿಐ ಪೊಲೀಸರಿಗೆ ಭದ್ರತೆಗೆ ಪಾವತಿಸಬೇಕಾದ ಹಣ ಪಾವತಿಸದೇ ಇರುವುದು.
ಮೂಲಗಳ ಪ್ರಕಾರ ಬಿಸಿಸಿಐ ಒಟ್ಟು 9 ಕೋಟಿ ರೂ. ಪಾವತಿಸಬೇಕಿತ್ತು. ಆದರೆ ಅದನ್ನು ನೀಡದ ಕಾರಣಕ್ಕೆ ಕೊಹ್ಲಿ ಪಡೆಗೆ ಭದ್ರತೆ ಒದಗಿಸಲು ನಿರಾಕರಿಸಿದ್ದಾರಂತೆ. ಹೀಗಾಗಿ ಸದ್ಯಕ್ಕೆ ಬಿಸಿಸಿಐ ಖಾಸಗಿ ಭದ್ರತಾ ಸಿಬ್ಬಂದಿಗಳನ್ನು ಕ್ರಿಕೆಟಿಗರ ಭದ್ರತೆಗೆ ನಿಯೋಜಿಸಿದೆ.