Publish Date: Mon, 16 Sep 2019 (08:51 IST)
Updated Date: Mon, 16 Sep 2019 (08:53 IST)
ಧರ್ಮಶಾಲಾ: ದ.ಆಫ್ರಿಕಾ ವಿರುದ್ಧ ಟಿ20 ಪಂದ್ಯದೊಂದಿಗೆ ಟೀಂ ಇಂಡಿಯಾ ಸೀಮಿತ ಓವರ್ ಗಳ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿತು.
ಇದುವರೆಗೆ ಟೀಂ ಇಂಡಿಯಾಗೆ ಒಪ್ಪೊ ಪ್ರಾಯೋಜಕತ್ವವಿತ್ತು. ಆದರೆ ಈಗ ಬೈಜುಸ್ ಪ್ರಾಯೋಜಕತ್ವ ವಹಿಸುತ್ತಿದ್ದು, ಈ ಹಿನ್ನಲೆಯಲ್ಲಿ ದ.ಆಫ್ರಿಕಾ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ನಾಯಕ ಕೊಹ್ಲಿ, ಮತ್ತು ಇತರ ಕ್ರಿಕೆಟಿಗರು ಹೊಸ ಸಮವಸ್ತ್ರವನ್ನು ಅನಾವರಣಗೊಳಿಸಿದರು.
ಹೊಸ ವಿನ್ಯಾಸದ ಜೆರ್ಸಿಯೊಂದಿಗೆ ಟೀಂ ಇಂಡಿಯಾ ಇನ್ನು ಮುಂದಿನ ಸೀಮಿತ ಓವರ್ ಗಳ ಪಂದ್ಯವಾಡಲಿದೆ. ಟೆಸ್ಟ್ ಚಾಂಪಿಯನ್ ಶಿಪ್ ಹಿನ್ನಲೆಯಲ್ಲಿ ಇತ್ತೀಚೆಗೆ ಮುಕ್ತಾಯವಾದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಟೀಂ ಇಂಡಿಯಾ ಹೊಸ ಬಿಳಿ ಸಮವಸ್ತ್ರ ಧರಿಸಿತ್ತು.