Publish Date: Sun, 15 Sep 2019 (18:35 IST)
Updated Date: Sun, 15 Sep 2019 (18:37 IST)
ಧರ್ಮಶಾಲಾ: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಮಳೆ ನಿಲ್ಲದ ಕಾರಣ ಆಟಗಾರರು ಮೈದಾನಕ್ಕೆ ಇಳಿಯಲೂ ಸಾಧ್ಯವಾಗಿಲ್ಲ.
ಬೆಳಿಗ್ಗಿನಿಂದಲೇ ಇಲ್ಲಿ ಮಳೆಯಾಗುತ್ತಿದ್ದು, ಈಗಲೂ ಹನಿ ನಿಂತಿಲ್ಲ. ಇದರಿಂದಾಗಿ ಆಟಗಾರರಿಗೆ ಅಭ್ಯಾಸವನ್ನೂ ನಡೆಸಲು ಸಾಧ್ಯವಾಗಿಲ್ಲ. ಈಗಾಗಲೇ ಟಾಸ್ ಆಗಬೇಕಿತ್ತು, ಆದರೆ ಮಳೆಯಿಂದಾಗಿ ಟಾಸ್ ಕೂಡಾ ತಡವಾಗಲಿದೆ.