Publish Date: Tue, 10 Nov 2020 (10:00 IST)
Updated Date: Tue, 10 Nov 2020 (10:01 IST)
ಸಿಡ್ನಿ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ಸರಣಿಯಿಂದ ಹಿಂದೆ ಸರಿದಿರುವ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಪ್ರತಿಕ್ರಿಯೆ ನೀಡಿದೆ.
ಕೊಹ್ಲಿ ಪಿತೃತ್ವ ರಜೆ ತೆಗೆದುಕೊಂಡಿದ್ದು ಮೊದಲ ಮೂರು ಟೆಸ್ಟ್ ಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ನಿಕ್ ಹೋಕ್ಲೀ ಅವರ ಮೊದಲ ಮಗುವಿನ ಜನನ ಸಂದರ್ಭ ಅವರು ಅಲ್ಲಿ ಇರಲೇಬೇಕಾಗುತ್ತದೆ. ಅವರ ನಿರ್ಧಾರವನ್ನು ನಾವು ಗೌರವಿಸಲೇಬೇಕು ಎಂದಿದ್ದಾರೆ. ಕೊಹ್ಲಿ ಇಲ್ಲದೇ ಇರುವುದರಿಂದ ಟೆಸ್ಟ್ ಸರಣಿಯಲ್ಲಿ ಸ್ಟಾರ್ ಆಕರ್ಷಣೆಯೇನೋ ಕಡಿಮೆಯಾಗಬಹುದು. ಆದರೆ ಕೊಹ್ಲಿ ನಿರ್ಧಾರವನ್ನು ಗೌರವಿಸಲೇಬೇಕಾಗುತ್ತದೆ ಎಂಬುದು ಅವರ ಅಭಿಪ್ರಾಯ.