ಬೆಂಗಳೂರು: ಐಪಿಎಲ್ 13 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯ ಪ್ರದರ್ಶನ ನೀಡಿದ ಮೇಲೆ ಹಲವರು ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸುವ ಮಾತನಾಡುತ್ತಿದ್ದಾರೆ.
ಈ ನಡುವೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದರೆ ಆರ್ ಸಿಬಿ ಸಮಸ್ಯೆ ಬಗೆಹರಿಯಲ್ಲ ಎಂದಿದ್ದಾರೆ. ಅದು ನಿಜ ಕೂಡಾ. ಸದ್ಯಕ್ಕೆ ಕೊಹ್ಲಿ ಬಿಟ್ಟರೆ ಆರ್ ಸಿಬಿಯಲ್ಲಿ ಸಮರ್ಥ ನಾಯಕರಿಲ್ಲ. ಎಬಿಡಿ ವಿಲಿಯರ್ಸ್ ಇದ್ದರೂ ಅವರ ಮೇಲೆ ಈಗಾಗಲೇ ಬ್ಯಾಟಿಂಗ್ ನ ಹೊಣೆಯಿದೆ. ನಾಯಕನಾಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸದೇ ಇದ್ದರೂ ಕೊಹ್ಲಿ ಹಲವು ಯುವ ಟ್ಯಾಲೆಂಟ್ ಗಳನ್ನು ಹುಟ್ಟು ಹಾಕಿದ್ದಾರೆ. ಇದು ಅವರ ಪಾಲಿಗೆ ಪ್ಲಸ್ ಪಾಯಿಂಟ್. ಯಾವುದೇ ಯುವ ಆಟಗಾರನಿಗೆ ನಾಯಕತ್ವದ ಹೊಣೆ ನೀಡಿದರೆ ಆರ್ ಸಿಬಿಗೆ ಆ ನಾಯಕನಿಗೆ ಹೊಂದಿಕೊಳ್ಳಲು ಸಮಯ ಬೇಕಾಗಬಹುದು. ಹೀಗಾಗಿ ಸದ್ಯಕ್ಕೆ ಕೊಹ್ಲಿಯನ್ನು ಬದಲಾಯಿಸುವ ಬದಲು ತಂಡವನ್ನು ಬಲಪಡಿಸುವ ಬಗ್ಗೆ ಆರ್ ಸಿಬಿ ಚಿಂತನೆ ನಡೆಸಬೇಕಿದೆ.