Publish Date: Wed, 15 Apr 2020 (09:28 IST)
Updated Date: Wed, 15 Apr 2020 (09:29 IST)
ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾನ್ಯವಾಗಿ ಮೈದಾನದಲ್ಲಿ ಆಕ್ರಮಣಕಾರಿ ಸ್ವಭಾವ ಪ್ರದರ್ಶಿಸುತ್ತಾರೆ. ಆಡುವಾಗ, ಎದುರಾಳಿಗಳ ವಿಕೆಟ್ ಕಿತ್ತಾಗ ಪ್ರೇಕ್ಷಕರತ್ತ ವಿಚಿತ್ರ ಸನ್ನೆ ಮಾಡಿ ಘರ್ಜಿಸುತ್ತಾರೆ. ಒಂದು ವೇಳೆ ಅವರು ಖಾಲಿ ಮೈದಾನದಲ್ಲಿ ಆಡಿದರೆ ಹೇಗಿರಬಹುದು?
ಆಸೀಸ್ ಕ್ರಿಕೆಟಿಗ ನಥನ್ ಲಿಯೋನ್ ಗೆ ಇಂತಹದ್ದೊಂದು ಕಲ್ಪನೆ ಬಂದಿದೆ. ಒಂದು ವೇಳೆ ಕೊಹ್ಲಿ ಖಾಲಿ ಮೈದಾನದಲ್ಲಿ ಆಡಿದರೆ ಹೇಗಿರಬಹುದು ಎಂದು ಅವರು ತಮಾಷೆಯಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
‘ನಾನು ನನ್ನ ಸಹ ಕ್ರಿಕೆಟಿಗನ ಜತೆ ಮಾತನಾಡುವ ಕೊಹ್ಲಿ ಆಸ್ಟ್ರೇಲಿಯಾಗೆ ಬಂದಾಗ ಖಾಲಿ ಮೈದಾನದಲ್ಲಿ ಆಡಿದರೆ ಹೇಗಿರಬಹುದು ಎಂದು ಮಾತನಾಡುತ್ತಿದ್ದೆ. ಅದು ಸ್ವಲ್ಪ ತಮಾಷೆಯೆನಿಸಬಹುದು. ಆದರೆ ಕೊಹ್ಲಿ ಸೂಪರ್ ಸ್ಟಾರ್. ಎಂತಹದ್ದೇ ಪರಿಸ್ಥಿತಿಗೂ ತಮ್ಮನ್ನು ಅಳವಡಿಸಿಕೊಳ್ಳುತ್ತಾರೆ’ ಎಂದು ಲಿಯೋನ್ ಹೇಳಿಕೊಂಡಿದ್ದಾರೆ.