Publish Date: Wed, 15 Apr 2020 (09:25 IST)
Updated Date: Wed, 15 Apr 2020 (09:26 IST)
ಮುಂಬೈ: ಪ್ರಧಾನಿ ಮೋದಿ ಮೇ 3 ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿ ಘೋಷಣೆ ಮಾಡುತ್ತಿದ್ದಂತೇ ಬಿಸಿಸಿಐ ಈ ಬಾರಿಯ ಐಪಿಎಲ್ ನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ಏಪ್ರಿಲ್ 15 ರವರೆಗೆ ಇದಕ್ಕೂ ಮೊದಲು ಐಪಿಎಲ್ ಮುಂದೂಡಲಾಗಿತ್ತು. ಆದರೆ ಈಗ ಕೊರೋನಾ ಪರಿಸ್ಥಿತಿ ಸುಧಾರಿಸದೇ ಇರುವ ಕಾರಣ ಲಾಕ್ ಡೌನ್ ಕೂಡಾ ವಿಸ್ತರಣೆ ಮಾಡಲಾಗಿದ್ದು, ಐಪಿಎಲ್ ನಡೆಸುವುದು ಕಷ್ಟವೇ.
ಪರಿಸ್ಥಿತಿ ತಿಳಿಯಾದ ನಂತರ ಸರ್ಕಾರದೊಂದಿಗೆ ಚರ್ಚಿಸಿ ಐಪಿಎಲ್ ನಡೆಸುವುದರ ಬಗ್ಗೆ ತೀರ್ಮಾನಿಸಲಾಗುವುದು ಎಂದು ಬಿಸಿಸಿಐ ಮೂಲಗಳು ಮಾಧ್ಯಮಗಳಿಗೆ ಹೇಳಿವೆ.