ಬೆಂಗಳೂರು: ಕರ್ನಾಟಕ ಮೂಲದ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಕೊರೋನಾದಿಂದಾಗಿ ಏಕಕಾಲಕ್ಕೆ ತಮ್ಮ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ.
ಆದರೆ ವೈಯಕ್ತಿಕವಾಗಿ ವೇದಾ ದುಃಖದಲ್ಲಿದ್ದರೂ ಬಿಸಿಸಿಐ ಆಕೆಯ ಸ್ಥಿತಿಗೆ ಸಂತಾಪ ಸೂಚಿಸಿದ್ದಾಗಲೀ, ಆಕೆಗೆ ಸಹಾಯವಾಗಲೀ ಮಾಡಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಲೀಸಾ ಸ್ತಲೇಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಸಂದರ್ಭದಲ್ಲಿಯೇ ಆಟಗಾರರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಬೇಕು. ಆಸ್ಟ್ರೇಲಿಯಾದಲ್ಲಿ ಕ್ರಿಕೆಟಿಗರ ಅಸೋಸಿಯೇಷನ್ ಈ ಕೆಲಸ ಮಾಡುತ್ತದೆ. ಆದರೆ ಭಾರತದಲ್ಲಿ ಇಂತಹದ್ದೊಂದು ಸಂಸ್ಥೆಯಿದ್ದೂ ಆಟಗಾರರ ಹಿತಾಸಕ್ತಿ ಕಡೆಗೆ ಗಮನ ಕೊಟ್ಟಿಲ್ಲ ಎಂದರೆ ಖೇದಕರ ಎಂದು ಲೀಸಾ ಆಕ್ರೋಶ ಹೊರಹಾಕಿದ್ದಾರೆ.