ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಅಡಲಿರುವ ಭಾರತ ತಂಡಕ್ಕೆ ಹಿರಿಯ ವೇಗಿ 38 ವರ್ಷದ ಆಶಿಷ್ ನೆಹ್ರಾರನ್ನು ಆಯ್ಕೆ ಮಾಡಿರುವುದು ಇದೀಗ ವಿವಾದಕ್ಕೀಡಾಗಿದೆ.
ಆರ್. ಅಶ್ವಿನ್, ಅಜಿಂಕ್ಯಾ ರೆಹಾನೆ ಅವರಂತಹ ಪ್ರತಿಭಾವಂತರನ್ನು ಪದೇ ಪದೇ ಹೊರಗಿಟ್ಟು ಅವಮಾನ ಮಾಡುತ್ತಿರುವ ಆಯ್ಕೆ ಸಮಿತಿ ವಯಸ್ಸಿನಲ್ಲಿ ಹಿರಿಯವರಾದ ನೆಹ್ರಾರನ್ನು ಆಯ್ಕೆ ಮಾಡಿರುವುದರ ಹಿಂದೆ ನಾಯಕ ಕೊಹ್ಲಿಯ ಪ್ರಭಾವವಿದೆಯೇ ಎಂಬ ಊಹಾಪೋಹಗಳು ಹಬ್ಬಿವೆ.
ನೆಹ್ರಾ ಮತ್ತು ಕೊಹ್ಲಿ ಇಬ್ಬರೂ ದೆಹಲಿಯವರು. ಕೊಹ್ಲಿ ಯುವ ಆಟಗಾರನಾಗಿದ್ದಾಗಿನಿಂದಲೂ ನೆಹ್ರಾ ಮಾರ್ಗದರ್ಶನ ಪಡೆದವರು. ಹೀಗಾಗಿ ಅದೇ ಋಣ ಸಂದಾಯ ಮಾಡಲು ಈ ಆಯ್ಕೆ ನಡೆದಿರಬಹುದೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಈ ನಡುವೆ ಪದೇ ಪದೇ ವಿಶ್ರಾಂತಿಯ ನೆಪವೊಡ್ಡಿ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾರನ್ನು ಹೊರಗಿಡುವುದು ಮತ್ತು ಪ್ರತಿಭಾವಂತ, ಉತ್ತಮ ಫಾರ್ಮ್ ನಲ್ಲಿರುವ ಅಜಿಂಕ್ಯಾ ರೆಹಾನೆಗೆ ಕೊಕ್ ನೀಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ನೆಹ್ರಾಗಿಂತ ಕಿರಿಯ ಯುವರಾಜ್ ಸಿಂಗ್ ರನ್ನು ವಯಸ್ಸು ಮತ್ತು ಫಾರ್ಮ್ ಹಿನ್ನಲೆಯಲ್ಲಿ ಹೊರಗಿಟ್ಟಿರುವುದಕ್ಕೂ ಅಭಿಮಾನಿಗಳು ಆಯ್ಕೆ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ