Publish Date: Fri, 02 Mar 2018 (08:26 IST)
Updated Date: Fri, 02 Mar 2018 (08:27 IST)
ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಇದೀಗ ಕ್ರಿಕೆಟ್ ನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ರಿಕೆಟಿಗ. ಸಚಿನ್ ಕಣ್ಗಾವಲಿನಲ್ಲೇ ಕಠಿಣ ತಾಲೀಮು ನಡೆಸುತ್ತಿರುವ ಅರ್ಜುನ್ ಇದೀಗ ಹಠಾತ್ ಮುಂಬೈ ಟಿ20 ಕ್ರಿಕೆಟ್ ಲೀಗ್ ನಿಂದ ಹಿಂದೆ ಸರಿದಿದ್ದಾರೆ.
ಮಾರ್ಚ್ 11 ರಿಂದ 21 ರವರೆಗೆ ಮುಂಬೈ ಟಿ20 ಕ್ರಿಕೆಟ್ ಲೀಗ್ ಪಂದ್ಯ ನಡೆಯುತ್ತಿದ್ದು, ಇದಕ್ಕೆ ಸ್ವತಃ ಸಚಿನ್ ತೆಂಡುಲ್ಕರ್ ರಾಯಭಾರಿಯಾಗಿದ್ದಾರೆ. ಇದಕ್ಕೆ ಅರ್ಜುನ್ ಕೂಡಾ ತಮ್ಮ ಹೆಸರು ನೊಂದಾಯಿಸಿದ್ದರು.
ಆದರೆ ಇದೀಗ ಹಠಾತ್ ಆಗಿ ಹೆಸರು ಹಿಂಪಡೆದಿದ್ದಾರೆ. ಇದಕ್ಕೆ ಸ್ವತಃ ಸಚಿನ್ ಸಲಹೆ ಕಾರಣ ಎನ್ನಲಾಗಿದೆ. ಇನ್ನಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ ಪುತ್ರ ಇನ್ನೂ ತರಬೇತಿ ಕಡೆಗೆ ಹೆಚ್ಚು ಗಮನ ಕೊಡಬೇಕು. ಇಂತಹ ಟೂರ್ನಿಗೆ ಇನ್ನೂ ತಯಾರಾಗಿಲ್ಲ ಎನ್ನುವ ಕಾರಣಕ್ಕೆ ಅರ್ಜುನ್ ಗೆ ಆಡದೇ ಇರಲು ಸಚಿನ್ ಸೂಚಿಸಿದ್ದಾರಂತೆ. ಅದರಂತೆ ಅಪ್ಪನ ಮಾತಿಗೆ ಕಿವಿಗೊಟ್ಟಿದ್ದಾರೆ ಅರ್ಜುನ್.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ