ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾಗೆ ವಿವಾಹ ಯಾಚನೆಯೊಂದಿಗೆ ಕಿರಿಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ನಿವಾಸಿ ದೆಬ್ ಕುಮಾರ್ ಮೈಟಿ ಎಂಬುವವನು ಸಚಿನ್ ಅವರ ಮನೆಯ ಲ್ಯಾಂಡ್ ಲೈನ್ ಗೆ ಕರೆ ಮಾಡಿ ಸಾರಾ ಗೆ ಮದುವೆಯಾಗುವಂತೆ ಪದೇಪದೇ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದು,ಜೊತೆಗೆ ಅಪಹರಣ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದನು ಎಂದು ತಿಳಿದು ಬಂದಿದೆ. ಮುಂಬಯಿ ಪೊಲೀಸ್ ವಿಶೇಷ ದಳವು ಆತನನ್ನು ಬಂಧಿಸಿದ್ದು, ಆತ ಸಚಿನ್ ಅವರ ಮನೆಯ ಲ್ಯಾಂಡ್ ಲೈನ್ ನಂಬರ್ ಹೇಗೆ ಪಡೆದ ಎಂಬುದೆ ಈಗ ಕುತೂಹಲಕಾರಿ ವಿಷಯ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಮ್ಮ ಮಕ್ಕಳಾದ ಸಾರಾ ಹಾಗು ಅರ್ಜುನ್ ಹೆಸರಲ್ಲಿ ನಕಲಿ ಟ್ವೀಟರ್ ಖಾತೆ ಹುಟ್ಟಿಕೊಂಡಿದ್ದು, ಅವರ ಹೆಸರಲ್ಲಿ ಯಾವುದೇ ಅಧಿಕೃತ ಟ್ವೀಟರ್ ಖಾತೆಗಳಿಲ್ಲ.ಅವರ ಹೆಸರಲ್ಲಿರುವ ನಕಲಿ ಟ್ವೀಟರ್ ಖಾತೆಗಳನ್ನು ಡಿಲೀಟ್ ಮಾಡುವಂತೆ ಸಚಿನ್ ಅವರು ಟ್ವೀಟರ್ ನಲ್ಲಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ