Publish Date: Tue, 05 Jan 2021 (09:17 IST)
Updated Date: Tue, 05 Jan 2021 (09:19 IST)
ಕೋಲ್ಕೊತ್ತಾ: ಲಘು ಹೃದಯಾಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆರೋಗ್ಯದ ಬಗ್ಗೆ ಬಿಸಿಸಿಐ ಮಾಜಿ ಅಧ್ಯಕ್ಷ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.
ಕೋಲ್ಕೊತ್ತಾದ ವುಡ್ ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಗಂಗೂಲಿಯನ್ನು ಭೇಟಿ ಮಾಡಿದ ಅನುರಾಗ್ ಠಾಕೂರ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಅನೇಕ ಹೋರಾಟಗಳನ್ನು ಗೆದ್ದ ಗಂಗೂಲಿ ಇಲ್ಲಿಯೂ ಗೆದ್ದು ಬರಲಿದ್ದಾರೆ. ನಾನು ಅವರನ್ನು ಭೇಟಿ ಮಾಡಿದಾಗ ನಗುನಗುತ್ತಲೇ ಮಾತನಾಡಿದರು. ಅವರೀಗ ಆರೋಗ್ಯವಾಗಿದ್ದಾರೆ. ಗಂಗೂಲಿ ಸದ್ಯದಲ್ಲೇ ತಮ್ಮ ಕ್ರಿಕೆಟ್ ಚಟುವಟಿಕೆಗಳಿಗೆ ಮರಳಲಿದ್ದಾರೆ ಎಂದಿದ್ದಾರೆ.