Publish Date: Thu, 09 Nov 2017 (08:32 IST)
Updated Date: Thu, 09 Nov 2017 (08:35 IST)
ಮುಂಬೈ: ಟಿ20 ಮಾದರಿ ಪಂದ್ಯಗಳಿಂದ ಧೋನಿ ಕೈಬಿಡಲು ಒತ್ತಾಯ ಹೆಚ್ಚುತ್ತಿದೆ. ನಾಯಕ ಕೊಹ್ಲಿ ಧೋನಿ ಬೆಂಬಲಕ್ಕೆ ಬಂದ ಬೆನ್ನಲ್ಲೇ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ಆಕಾಶ್ ಚೋಪ್ರಾ ಧೋನಿಯನ್ನು ಕೈ ಬಿಡಲು ಸಲಹೆ ನೀಡಿದ್ದಾರೆ.
ಮುಂಬರುವ ಶ್ರೀಲಂಕಾ ಸರಣಿಗೆ ಧೋನಿಯನ್ನು ಕೈಬಿಟ್ಟು ಯುವ ಆಟಗಾರನಿಗೆ ಅವಕಾಶ ನೀಡಬೇಕು ಎಂದು ಚೋಪ್ರಾ ಒತ್ತಾಯಿಸಿದ್ದಾರೆ. ಧೋನಿಗೆ ಟಿ20 ಪಂದ್ಯಗಳಿಂದ ಕೊಕ್ ನೀಡಬೇಕೆಂದು ಮಾಜಿ ಆಟಗಾರರಾದ ವಿವಿಎಸ್ ಲಕ್ಷ್ಮಣ್, ಅಜಿತ್ ಅಗರ್ಕರ್ ಒತ್ತಾಯಿಸಿದ ಬೆನ್ನಲ್ಲೇ ಆಕಾಶ್ ಚೋಪ್ರಾ ಈ ಹೇಳಿಕೆ ನೀಡಿದ್ದಾರೆ.
ಮಾಜಿ ಆಟಗಾರರ ಟೀಕೆಗೆ ಸಿಡಿದೆದ್ದಿದ್ದ ಕೊಹ್ಲಿ ಒಂದು ಪಂದ್ಯದಲ್ಲಿ ವಿಫಲವಾದ ಮಾತ್ರಕ್ಕೆ ಧೋನಿಯ ಬೆನ್ನತ್ತುವುದೇಕೆ ಎಂದು ಪ್ರಶ್ನಿಸಿದ್ದರು. ಆದರೆ ಕೊಹ್ಲಿಯ ಈ ಹೇಳಿಕೆ ಮಾಜಿ ಆಟಗಾರರ ಟೀಕಾ ಪ್ರಹಾರಕ್ಕೆ ಬ್ರೇಕ್ ಹಾಕಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ