ಮುಂಬೈ: ವಿರಾಟ್ ಕೊಹ್ಲಿ ಆಕ್ರಮಣಕಾರಿ ಸ್ವಭಾವ ನೋಡಿದರೆ ಆತಂಕವಾಗುತ್ತದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದರು. ಇದೀಗ ಅದೇ ಥರದ ಅಭಿಪ್ರಾಯವನ್ನು ಮತ್ತೊಬ್ಬ ಮಾಜಿ ಕ್ರಿಕೆಟಿಗ ಹೊರಹಾಕಿದ್ದಾರೆ.
ಕೊಹ್ಲಿ ಸ್ವಭಾವ ತೀರಾ ಆಕ್ರಮಣಕಾರಿ. ಅದು ಅವರ ಸ್ವಭಾವ. ಆದರೆ ಅವರ ಸ್ವಭಾವವನ್ನು ಇತರ ಆಟಗಾರರೂ ಅನುಕರಿಸಬೇಕೆಂದಿಲ್ಲ. ಒಂದು ಬಲವಂತವಾಗಿ ಅನುಕರಿಸಲು ಹೋದರೆ ಎಲ್ಲಾ ಸಂದರ್ಭದಲ್ಲೂ ತಮ್ಮ ಸ್ವಭಾವಕ್ಕೆ ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ. ಇದು ಆಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಡಂ ಗಿಲ್ ಕ್ರಿಸ್ಟ್ ಅಭಿಪ್ರಾಯಪಟ್ಟಿದ್ದಾರೆ.
ಹಾಗಾಗಿ ಬಲವಂತವಾಗಿ ಕೊಹ್ಲಿ ಹಾಗಿರಲು ಪ್ರಯತ್ನ ಮಾಡಬೇಡಿ ಎಂದು ಯುವ ಕ್ರಿಕೆಟಿಗರಿಗೆ ಗಿಲ್ ಕ್ರಿಸ್ಟ್ ಸಲಹೆ ಮಾಡಿದ್ದಾರೆ. ಇತ್ತೀಚೆಗೆ ರಾಹುಲ್ ದ್ರಾವಿಡ್ ಕೂಡಾ ವಿರಾಟ್ ಕೊಹ್ಲಿಯಂತೆ ಅತಿಯಾದ ಆಕ್ರಮಣಕಾರಿ ಸ್ವಭಾವ ಅನುಕರಿಸಲು ಹೋಗುವುದು ಒಳ್ಳೆಯದಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ