ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ಮೊದಲನೇ ಟಿ20 ಪಂದ್ಯದ ವೇಳೆ ಡಗ್ ಔಟ್ ನಲ್ಲಿ ಕುಳಿತಿದ್ದ ಟೀಂ ಇಂಡಿಯಾ ನಾಯಕ ವಾಕಿ ಟಾಕಿ ಬಳಸಿದ್ದು ವಿವಾದಕ್ಕೆ ಕಾರಣವಾಗಿದೆ.
ಆದರೆ ಪ್ರಕರಣದಲ್ಲಿ ವಿರಾಟ್ ಕೊಹ್ಲಿಗೆ ಐಸಿಸಿ ಕ್ಲೀನ್ ಚಿಟ್ ನೀಡಿದೆ. ಕೊಹ್ಲಿ ಹೀಗೆ ಡ್ರೆಸ್ಸಿಂಗ್ ರೂಂ ನಲ್ಲಿದ್ದ ಸಹಾಯಕ ಸಿಬ್ಬಂದಿ ಜತೆ ವಾಕಿ ಟಾಕಿ ಬಳಸಿ ಮಾತುಕತೆ ನಡೆಸಲು ಮೊದಲೇ ಅನುಮತಿ ಪಡೆದಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಹಾಗಾಗಿ ಕೊಹ್ಲಿ ಮಾಡಿದ್ದು ತಪ್ಪಲ್ಲ ಎಂದು ಐಸಿಸಿ ಹೇಳಿದೆ.
ಬೌಂಡರಿ ಬಳಿ ಗೆರೆ ಬಳಿ ಆಟಗಾರರು ಕುಳಿತು ಕೊಳ್ಳುವ ಡಗ್ ಔಟ್ ನಲ್ಲಿ ಕೊಹ್ಲಿ ವಾಕಿ ಟಾಕಿಯಲ್ಲಿ ಮಾತನಾಡುವುದನ್ನು ಟಿವಿ ಕ್ಯಾಮರಾಗಳು ಸೆರೆ ಹಿಡಿದು ಪ್ರಸಾರ ಮಾಡಿದ್ದವು. ಇದು ವಿವಾದಕ್ಕೆ ಕಾರಣವಾಗಿತ್ತು. ಐಸಿಸಿ ನಿಯಮದ ಪ್ರಕಾರ ಆಟಗಾರರು ಮೊಬೈಲ್ ಬಳಸುವುದಕ್ಕೆ ನಿರ್ಬಂಧವಿದೆ. ಆದರೆ ವಾಕಿ ಟಾಕಿ ಬಳಸಬಹುದು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ