ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ಕಾಮೆಂಟರಿ ವೇಳೆ ತಾವು ಮಾಡಿದ ಪ್ರಮಾದವೊಂದಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ, ಕಾಮೆಂಟೇಟರ್ ಆಡಂ ಗಿಲ್ ಕ್ರಿಸ್ಟ್ ಟೀಂ ಇಂಡಿಯಾ ಯುವ ವೇಗಿ ನವದೀಪ್ ಸೈನಿ ಕ್ಷಮೆ ಕೇಳಿದ್ದಾರೆ.
ಕಾಮೆಂಟರಿ ನಡುವೆ ಗಿಲ್ ಕ್ರಿಸ್ಟ್ ನವದೀಪ್ ಸೈನಿ ಇತ್ತೀಚೆಗೆ ತಂದೆಯನ್ನು ಕಳೆದುಕೊಂಡರೂ ತಂಡಕ್ಕಾಗಿ ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡಿದ್ದಾರೆ ಎಂದಿದ್ದರು. ಆದರೆ ಮೊಹಮ್ಮದ್ ಸಿರಾಜ್ ಹೆಸರು ಹೇಳುವ ಬದಲು ತಪ್ಪಾಗಿ ನವದೀಪ್ ಸೈನಿ ಹೇಳಿದ್ದರು. ತಮ್ಮ ಪ್ರಮಾದದ ಅರಿವಾಗುತ್ತಿದ್ದಂತೇ ಗಿಲ್ ಕ್ರಿಸ್ಟ್ ಯುವ ವೇಗಿಗಳ ಕ್ಷಮೆ ಯಾಚಿಸಿದ್ದಾರೆ.