Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಯುವರಾಜ್ ಸಿಂಗ್

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಯುವರಾಜ್ ಸಿಂಗ್
ಮುಂಬೈ , ಸೋಮವಾರ, 10 ಜೂನ್ 2019 (13:56 IST)
ಮುಂಬೈ: ಸಿಕ್ಸರ್ ಮ್ಯಾನ್ ಯುವರಾಜ್ ಸಿಂಗ್ ರಂಜನೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. 2011 ರ ವಿಶ್ವಕಪ್ ಗೆಲುವಿನ ರೂವಾರಿಯಾಗಿದ್ದ ಯುವಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.


ಮುಂಬೈನಲ್ಲಿ ಯುವರಾಜ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗದೇ ಇರುವ ಕಾರಣಕ್ಕೆ ಯುವಿ ಕೆನಡಾ ಟಿ20 ಲೀಗ್ ನಲ್ಲಿ ಆಡಲು ಸಿದ್ಧತೆ ನಡೆಸಿದ್ದಾರೆ.

ವಿದೇಶೀ ಲೀಗ್ ನಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಜತೆ ಮಾತುಕತೆ ನಡೆಸಿದ ಬಳಿಕ ಯುವರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳುವ ನಿರ್ಧಾರ ಪ್ರಕಟಿಸಿದ್ದಾರೆ. 2000 ರಲ್ಲಿ ಯುವಿ ಟೀಂ ಇಂಡಿಯಾ ಪ್ರವೇಶಿಸಿದ್ದಾರೆ. ಇದುವರೆಗೆ 40 ಟೆಸ್ಟ್ ಮತ್ತು 304 ಏಕದಿನ ಮತ್ತು 58 ಟಿ20 ಪಂದ್ಯವಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಕ್ರಿಕೆಟ್ 2019: ಶಿಖರ್ ಧವನ್ ಸೆಂಚುರಿಗೆ ಪುಡಿಯಾದ ದಾಖಲೆಗಳೆಷ್ಟು ಗೊತ್ತಾ?