Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಶ್ವಕಪ್ 2019: ಓವಲ್ ಮೈದಾನದಲ್ಲಿ ಭಾರತೀಯ ಪ್ರೇಕ್ಷಕರನ್ನು ಕಂಡು ದಂಗಾದ ಕಾಮೆಂಟೇಟರ್ ಗಳು!

ವಿಶ್ವಕಪ್ 2019: ಓವಲ್ ಮೈದಾನದಲ್ಲಿ ಭಾರತೀಯ ಪ್ರೇಕ್ಷಕರನ್ನು ಕಂಡು ದಂಗಾದ ಕಾಮೆಂಟೇಟರ್ ಗಳು!
ಲಂಡನ್ , ಸೋಮವಾರ, 10 ಜೂನ್ 2019 (09:26 IST)
ಲಂಡನ್: ವಿಶ್ವಕಪ್ 2019 ರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾಗಿದ್ದ ಅಸಂಖ್ಯಾತ ಅಭಿಮಾನಿಗಳ ಬೆಂಬಲ ನೋಡಿ ವೀಕ್ಷಕ ವಿವರಣೆಕಾರರಾದ ಖ್ಯಾತ ಮಾಜಿ ಕ್ರಿಕೆಟಿಗರು ದಂಗಾಗಿದ್ದಾರೆ.


ಓವಲ್ ಮೈದಾನ ಸಂಪೂರ್ಣವಾಗಿ ನೀಲಿ ಟಿ ಶರ್ಟ್ ತೊಟ್ಟ ಭಾರತೀಯ ಪ್ರೇಕ್ಷಕರಿಂದಲೇ ಭರ್ತಿಯಾಗಿತ್ತು. ಇವರ ಮಧ್ಯೆ ಕೆಲವೇ ಕೆಲವು ಹಳದಿ ಶರ್ಟ್ ತೊಟ್ಟ ಆಸೀಸ್ ಸಮರ್ಥಕರಿದ್ದರು. ಅಷ್ಟೇ ಅಲ್ಲದೆ, ಧೋನಿಗೆ ಗ್ಲೌಸ್ ನಲ್ಲಿ ಬಲಿದಾನ ಚಿಹ್ನೆ ಬಳಸಬಾರದು ಎಂದು ಐಸಿಸಿ ತಾಕೀತು ಮಾಡಿದ್ದಕ್ಕೆ ತಾವೇ ಬಲಿದಾನ ಚಿಹ್ನೆ ಪ್ರದರ್ಶಿಸಿದ್ದಾರೆ.

ಇವರನ್ನು ನೋಡಿ ವೀಕ್ಷಕ ವಿವರಣೆಕಾರರಾದ ಮೈಕಲ್ ವಾನ್, ಆಸೀಸ್ ಮೂಲದ ಮೈಕಲ್ ಸ್ಲಾಟರ್ ದಂಗಾಗಿ ಹೋಗಿದ್ದಾರೆ. ಮೈಕಲ್ ಅಂತೂ ನಾನು ಕಾಮೆಂಟರಿ ಹೇಳುವುದನ್ನು ಬಿಟ್ಟು ಹಳದಿ ಶರ್ಟ್ ಹಂಚಲು ಹೋಗುವುದು ಒಳ್ಳೆಯದೇನೋ ಎಂದು ತಮಾಷೆ ಮಾಡಿಕೊಂಡಿದ್ದಾರೆ. ಅಂತೂ ಭಾರತೀಯ ಕ್ರಿಕೆಟಿಗರಿಗೆ ತವರಿನಲ್ಲಿ ಆಡಿದ ಅನುಭವವೇ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ