Publish Date: Sat, 19 Jun 2021 (16:51 IST)
Updated Date: Sat, 19 Jun 2021 (16:52 IST)
ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿದೆ.
ರೋಹಿತ್-ಶುಬ್ನಂ ಗಿಲ್ ಭಾರತಕ್ಕೆ ಉತ್ತಮ ಆರಂಭ ಒದಗಿಸಿತು. ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲ ವಿಕೆಟ್ ಗೆ ರೋಹಿತ್-ಗಿಲ್ 62 ರನ್ ಕಲೆ ಹಾಕಿದರು. ಈ ವೇಳೆ 34 ರನ್ ಗಳಿಸಿ ಉತ್ತಮ ಲಯದಲ್ಲಿದ್ದ ರೋಹಿತ್ ಜೆಮಿಸನ್ ಗೆ ವಿಕೆಟ್ ಒಪ್ಪಿಸಿದರು.
ಇತ್ತೀಚೆಗಿನ ವರದಿ ಬಂದಾಗ ಚೇತೇಶ್ವರ ಪೂಜಾರ ಖಾತೆ ತೆರೆಯದೇ ಕ್ರೀಸ್ ನಲ್ಲಿದ್ದಾರೆ. ಅವರಿಗೆ 28 ರನ್ ಗಳಿಸಿರುವ ಶುಬ್ನಂ ಗಿಲ್ ಸಾಥ್ ನೀಡುತ್ತಿದ್ದಾರೆ. ಪಂದ್ಯದ ಮೊದಲ ದಿನ ಮಳೆಗೆ ಆಹುತಿಯಾಗಿತ್ತು. ಇಂದು ಎರಡನೇ ದಿನವಾಗಿದ್ದು, ಹೆಚ್ಚುವರಿ ಓವರ್ ಗಳ ಆಟ ನಡೆಯಲಿದೆ.