Publish Date: Sat, 19 Jun 2021 (10:21 IST)
Updated Date: Sat, 19 Jun 2021 (10:23 IST)
ಸೌಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ಅವಧಿ ಮಳೆಗೆ ಆಹುತಿಯಾದ ಬೆನ್ನಲ್ಲೇ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಭಾರತೀಯರನ್ನು ಕೆಣಕಿದ್ದಾರೆ.
ಟ್ವಿಟರ್ ನಲ್ಲಿ ಭಾರತೀಯರನ್ನು ಕೆಣಕಿರುವ ವಾನ್ ಸದ್ಯ.. ಭಾರತ ಮಳೆಯಿಂದಾಗಿ ಬಚಾವ್ ಆಯ್ತು ಎಂದು ಕುಹುಕವಾಡಿದ್ದಾರೆ. ಆದರೆ ಇದಕ್ಕೆ ಭಾರತೀಯ ಅಭಿಮಾನಿಗಳು ತಕ್ಕ ತಿರುಗೇಟು ನೀಡಿದ್ದಾರೆ.
ನಿಮ್ಮದೇ ರಾಷ್ಟ್ರದಲ್ಲಿ ಫೈನಲ್ಸ್ ನಡೆಯುತ್ತಿದೆ. ಆದರೆ ನಿಮ್ಮ ರಾಷ್ಟ್ರವೇ ಫೈನಲ್ಸ್ ಗೆ ಅರ್ಹತೆ ಗಿಟ್ಟಿಸಿಲ್ಲ ಎಂಬುದು ಎಂಥಾ ನಾಚಿಕೆಗೇಡಿನ ವಿಚಾರ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ. ಮತ್ತೆ ಕೆಲವರು ನೀವು ಕೆಣಕಿದ ಮೇಲೆ ಭಾರತ ಖಂಡಿತಾ ಗೆದ್ದೇ ಗೆಲ್ಲುತ್ತದೆ ಎಂದಿದ್ದಾರೆ.