ದೆಹಲಿ: ಡಬ್ಲ್ಯುಪಿಎಲ್ 2024 ರ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಜೈಂಟ್ಸ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದು 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಪೇರಿಸಿದೆ.
ಇಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿಗೆ ಲೌರಾ ವೋಲ್ವಾರ್ಡ್ತ್ ಮತ್ತು ನಾಯಕಿ ಬೆತ್ ಮೂನಿ ಭರ್ಜರಿ ಆರಂಭ ನೀಡಿದರು. ಮೊದಲ ವಿಕೆಟ್ ಗೆ ಈ ಜೋಡಿ 140 ರನ್ ಗಳ ಜೊತೆಯಾಟವಾಡಿತು. ಆದರೆ ಲೌರಾ 76 ರನ್ ಗಳಿಸಿದ್ದಾಗ ದುರದೃಷ್ಟವಶಾತ್ ರನೌಟ್ ಆದರು. ಕೊನೆಯ ಎರಡು ಓವರ್ ಗಳಲ್ಲಿ ಡೆಲ್ಲಿ ನಾಲ್ಕು ವಿಕೆಟ್ ಕಳೆದುಕೊಳ್ಳದೇ ಇದ್ದಿದ್ದರೆ ಬಹುಶಃ ಮೊತ್ತ 200 ರ ಗಡಿ ದಾಟುತ್ತಿತ್ತು.
ಆದರೆ ಇನ್ನೊಂದೆಡೆ ತಮ್ಮ ಭರ್ಜರಿ ಆಟ ಮುಂದುವರಿಸಿದ ಬೆತ್ ಮೂನಿ 85 ರನ್ ಗಳಿಸಿ ಕೊನೆಯವರೆಗೆ ಅಜೇಯರಾಗುಳಿದರು. ಇನ್ನೊಂದೆಡೆ ಅವರಿಗೆ ಸಾಥ್ ನೀಡಿದ ಫೋಬೆ ಲಿಚ್ ಫೀಲ್ಡ್ ರನ್ ಗಳಿಸಿದರು. ಆರ್ ಸಿಬಿ ಪರ ಇಂದು ಏಳು ಬೌಲರ್ ಗಳು ಕಣಕ್ಕಿಳಿದರೂ ಸೋಫಿ ಮೊಲಿನಾಕ್ಸ್ ಮತ್ತು ಜಾರ್ಜಿಯಾ ವಾರೆ ಹಾಮ್ ಗೆ ಮಾತ್ರ ತಲಾ 1 ವಿಕೆಟ್ ಸಿಕ್ಕಿತ್ತು. ಆರ್ ಸಿಬಿಯ ಏಕ್ತಾ ಬಿಷ್ತ್ ಎರಡು ರನೌಟ್ ಗೆ ಕಾರಣರಾದರು.
ಆರ್ ಸಿಬಿ ಬೌಲರ್ ಗಳು ಮತ್ತೊಮ್ಮೆ ಶಿಸ್ತಿನ ದಾಳಿ ಸಂಘಟಿಸಲು ವಿಫಲರಾದರು. ಇದೀಗ ಆರ್ ಸಿಬಿ ಗೆಲ್ಲಲು ಪ್ರತೀ ಓವರ್ ಗೆ 10 ರನ್ ಗಳಂತೇ ಭರ್ತಿ 200 ರನ್ ಗಳಿಸಬೇಕಿದೆ.