Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಶ್ವಕಪ್ 2019: ಲಕ್ಕಿ ಮೈದಾನದಲ್ಲಿ ವಿಜೃಂಭಿಸಿದ ಶಿಖರ್ ಧವನ್: ಆಸೀಸ್ ಬೌಲರ್ ಗಳು ಬೇಸ್ತು

ವಿಶ್ವಕಪ್ 2019: ಲಕ್ಕಿ ಮೈದಾನದಲ್ಲಿ ವಿಜೃಂಭಿಸಿದ ಶಿಖರ್ ಧವನ್: ಆಸೀಸ್ ಬೌಲರ್ ಗಳು ಬೇಸ್ತು
ಲಂಡನ್ , ಭಾನುವಾರ, 9 ಜೂನ್ 2019 (18:50 IST)
ಲಂಡನ್: ಓವಲ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ 2019 ರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ಭರ್ಜರಿ ಶತಕದಿಂದಾಗಿ ಟೀಂ ಇಂಡಿಯಾ ಗೆಲ್ಲಲು ಎದುರಾಳಿಗಳಿಗೆ 353 ರನ್ ಗಳ ಗುರಿ ನೀಡಿದೆ.


ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕರು ಶತಕದ ಜತೆಯಾಟ ನೀಡಿದರು. ರೋಹಿತ್ ಶರ್ಮಾ 57 ರನ್ ಗಳಿಸಿ ಔಟಾದರೆ ಧವನ್ ಶತಕ ಗಳಿಸಿ ತಮ್ಮ ಇನಿಂಗ್ಸ್ ‍ನ್ನು 117 ರನ್ ಗಳಿಗೆ ವಿಸ್ತರಿಸಿದರು. ಈ ಮೈದಾನದಲ್ಲಿ ಧವನ್ ಗೆ ಇದು ಮೂರನೇ ಶತಕ ಎನ್ನುವುದು ವಿಶೇಷ.

ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ ಕೂಡಾ ಆರಂಭದಲ್ಲಿ ನಿಧಾನವಾಗಿದ್ದರೂ ಬಳಿಕ ರನ್ ಸಿಡಿಸಿ ಎದುರಾಳಿ ಬೌಲರ್ ಗಳನ್ನು ಬೆಂಡೆತ್ತಿದರು. ಧವನ್ ಬಳಿಕ ಕ್ರೀಸ್ ಗೆ ನಾಲ್ಕನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಹಾರ್ದಿಕ್ ಪಾಂಡ್ಯ ತಮಗೆ ಒಪ್ಪಿಸಿದ ಕೆಲಸವನ್ನು ಸೂಕ್ತವಾಗಿಯೇ ನಿಭಾಯಿಸಿದರು. ರನ್ ಗತಿ ಹೆಚ್ಚಿಸಬೇಕಾಗಿದ್ದಾಗ 27 ಎಸೆತಗಳಲ್ಲಿ 48 ರನ್ ಗಳಿಸಿ ದುರಾದೃಷ್ಟವಶಾತ್ ಔಟಾದರು.

ಬಳಿಕ ಕ್ರೀಸ್ ಗೆ ಬಂದ ಧೋನಿ ಕೂಡಾ ರನ್ ಗತಿ ಏರಿಸಲು ಪ್ರಯತ್ನಿಸಿದರೂ ಕೊನೆಯ ಓವರ್ ನ ಮೊದಲ ಎಸೆತದಲ್ಲಿಯೇ 14 ಬಾಲ್ ಗಳಲ್ಲಿ 27 ರನ್ ಗಳಿಸಿ ಔಟಾದರು. ಕೊನೆಯ ಎರಡು ಎಸೆತಗಳಿರುವಾಗ ನಾಯಕ ಕೊಹ್ಲಿ ಕೂಡಾ 82 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಟೀಂ ಇಂಡಿಯಾ 352 ರನ್ ಗಳಿಸಿತು.  ಒಂದು ವೇಳೆ ಇಂದು ಆಸೀಸ್ ಈ ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತಿದ್ದರೆ ಈ ಮೈದಾನದಲ್ಲಿ ಅದು ದಾಖಲೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಗ್ಲೌಸ್ ವಿವಾದಕ್ಕೆ ವೀರೇಂದ್ರ ಸೆಹ್ವಾಗ್ ಸೂಚಿಸಿದ ಐಡಿಯಾವೇನು ಗೊತ್ತಾ?