ಲಂಡನ್: ವಿಶ್ವಕಪ್ ಆಡುತ್ತಿರುವ ಧೋನಿ ಮೊದಲ ಪಂದ್ಯದಲ್ಲಿ ಸೇನೆಯ ಬಲಿದಾನ ಚಿಹ್ನೆಯನ್ನು ಗ್ಲೌಸ್ ನಲ್ಲಿ ಬಳಸಿದ್ದಕ್ಕೆ ಐಸಿಸಿ ಆಕ್ಷೇಪವೆತ್ತಿದೆ. ಆದರೆ ಧೋನಿ ಮತ್ತು ಐಸಿಸಿಗೆ ನಿಯಮಗಳಿಗೆ ತೊಡಕಾಗದಂತೆ ಚಿಹ್ನೆ ಬಳಸಲು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಉಪಾಯವೊಂದನ್ನು ಹೇಳಿದ್ದಾರೆ.
ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ಧೋನಿಗೆ ಸೆಹ್ವಾಗ್ ಐಡಿಯಾ ಹೇಳಿಕೊಟ್ಟಿದ್ದಾರೆ. ಗ್ಲೌಸ್ ಮೇಲೆ ಚಿಹ್ನೆ ಬಳಸಬಾರದು ಎಂಬ ನಿಯಮವಿದ್ದರೆ ಧೋನಿ ಅದನ್ನು ಮುರಿಯುವುದು ಬೇಡ. ಬದಲಾಗಿ ತಮ್ಮ ಬ್ಯಾಟ್ ಮೇಲೆ ಬಳಸಿಕೊಳ್ಳಲಿ.
ಹೇಗಿದ್ದರೂ ಒಬ್ಬ ಕ್ರಿಕೆಟಿಗ ಬ್ಯಾಟ್ ಮೇಲೆ ಎರಡು ಲೋಗೋ ಬಳಸಿಕೊಳ್ಳಬಹುದು. ಹೀಗಾಗಿ ಧೋನಿ ಐಸಿಸಿಯಿಂದ ಒಪ್ಪಿಗೆ ಪತ್ರ ಪಡೆದು ಬ್ಯಾಟ್ ಮೇಲೆ ಲೋಗೋ ಬಳಸಿಕೊಳ್ಳಬಹುದು ಎಂದು ಸೆಹ್ವಾಗ್ ಉಪಾಯವೊಂದನ್ನು ಹೇಳಿಕೊಟ್ಟಿದ್ದಾರೆ.