Publish Date: Fri, 15 Jan 2021 (09:24 IST)
Updated Date: Fri, 15 Jan 2021 (09:25 IST)
ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡುವ ಬಳಗವನ್ನು ಪ್ರಕಟಿಸಲು ಟೀಂ ಇಂಡಿಯಾ ನಿಧಾನ ಮಾಡಿದ್ದಕ್ಕೆ ಕಾರಣ ಗಾಯಾಗಳು ಆಟಗಾರರು ಎಂದು ತಿಳಿದುಬಂದಿದೆ.
ಸಾಮಾನ್ಯ ಒಂದು ದಿನ ಮೊದಲೇ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ಆಡುವ ಬಳಗವನ್ನು ಘೋಷಿಸುತ್ತದೆ. ಆದರೆ ಇಂದಿನ ಪಂದ್ಯದ ಆಡುವ ಬಳಗವನ್ನು ಆಸ್ಟ್ರೇಲಿಯಾ ಮಾತ್ರ ಮೊದಲೇ ಘೋಷಿಸಿತ್ತು. ಆದರೆ ಟೀಂ ಇಂಡಿಯಾಕ್ಕೆ ಅಂತಿಮ 11 ಆಟಗಾರರನ್ನು ಹೊಂದಿಸುವುದೇ ತಲೆನೋವಾಗಿತ್ತು. ಹೀಗಾಗಿ ಮೊದಲೇ ತಂಡ ಪ್ರಕಟಿಸದೇ ಇರಲು ನಿರ್ಧರಿಸಿತು.