Publish Date: Thu, 14 Jan 2021 (09:57 IST)
Updated Date: Thu, 14 Jan 2021 (09:59 IST)
ಮುಂಬೈ: ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಮುಂಬೈ ಮತ್ತು ಕೇರಳ ನಡುವಿನ ಪಂದ್ಯದಲ್ಲಿ ಮೊಹಮ್ಮದ್ ಅಜರುದ್ದೀನ್ ಎಂಬ ಯುವ ಕ್ರಿಕೆಟಿಗ 37 ಎಸೆತಗಳಲ್ಲಿ ಶತಕ ಚಚ್ಚಿ ರಾತ್ರೋ ರಾತ್ರಿ ಮನೆ ಮಾತಾಗಿದ್ದಾನೆ.
ಕೇರಳದ ಯುವ ಬ್ಯಾಟ್ಸ್ ಮನ್ ಮೊಹಮ್ಮದ್ ಅಜರುದ್ದೀನ್ ಅಂತಿಮವಾಗಿ 54 ಎಸೆತಗಳಿಂದ 137 ರನ್ ಗಳಿಸಿದ್ದು, ಇದು ಕಿರು ಮಾದರಿ ಕ್ರಿಕೆಟ್ ನಲ್ಲಿ ಮೂರನೇ ಗರಿಷ್ಠ ರನ್ ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ನಿಗದಿತ 20 ಓವರ್ ಗಳಲ್ಲಿ 197 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕೇರಳ 15.5 ಓವರ್ ಗಳಲ್ಲೇ ಗುರಿ ಮುಟ್ಟಿದೆ. ಎರಡನೇ ವಿಕೆಟ್ ಗೆ ಸಂಜು ಸ್ಯಾಮ್ಸನ್ ಮತ್ತು ಅಜರುದ್ದೀನ್ ಯರ್ರಾ ಬಿರ್ರಿ ರನ್ ಚಚ್ಚಿದರು. ಇವರಿಬ್ಬರ ಸಿಡಿಲಬ್ಬರದ ಬ್ಯಾಟಿಂಗ್ ಗೆ ಕ್ರಿಕೆಟ್ ಪ್ರಿಯರು ಬೆರಗಾಗಿದೆ.