ಮುಂಬೈ: ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾಗೆ ಗಾಯಾಳುಗಳಾಗಿ ಚೇತರಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ನಾಯಕರಾಗಿದ್ದು, ಪ್ರಸಿದ್ಧ ಕೃಷ್ಣ ಕೂಡಾ ಕಮ್ ಬ್ಯಾಕ್ ಮಾಡಿದ್ದಾರೆ.
ಆದರೆ ಇದೀಗ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಕೂಡಾ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅವರನ್ನು ಟಿ20 ಸರಣಿಗೆ ಆಯ್ಕೆ ಮಾಡಲಾಗಿಲ್ಲ. ಅದಕ್ಕೆ ಕಾರಣ ಏನು?
ಬಿಸಿಸಿಐ ವೈದ್ಯಕೀಯ ವರದಿ ಪ್ರಕಾರ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆರಂಭಿಸಿದ್ದರೂ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಹೀಗಾಗಿ ಅವರು ಫಿಟ್ನೆಸ್ ಸಾಬೀತುಪಡಿಸುವವರೆಗೆ ತಂಡಕ್ಕೆ ಆಯ್ಕೆಯಾಗಲ್ಲ. ಏಷ್ಯಾ ಕಪ್ ವೇಳೆಗೆ ಫಿಟ್ ಆಗುವ ಗುರಿ ಇಬ್ಬರೂ ಆಟಗಾರರದ್ದಾಗಿದೆ.