ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 70 ರನ್ ಸಿಡಿಸಿದ್ದಾರೆ.
ಹಾರ್ದಿಕ್ ಕಳೆದ ಕೆಲವು ಪಂದ್ಯಗಳಿಂದ ರನ್ ಬರಗಾಲ ಎದುರಿಸುತ್ತಿದ್ದರು. ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ ನಲ್ಲಿ ಆಡಿದ ಅತ್ಯುತ್ತಮ ಇನಿಂಗ್ಸ್ ಬಳಿಕ ಹಾರ್ದಿಕ್ ಬ್ಯಾಟ್ ನಿಂದ ಹೇಳಿಕೊಳ್ಳುವಂತಹ ಇನಿಂಗ್ಸ್ ಬಂದಿರಲಿಲ್ಲ. ನಿನ್ನೆಯ ಇನಿಂಗ್ಸ್ ನಲ್ಲೂ ಆರಂಭದಲ್ಲಿ ತೀರಾ ನಿಧಾನಿಯಾಗಿದ್ದ ಹಾರ್ದಿಕ್ ಕೊನೆಯ ಓವರ್ ಗಳಲ್ಲಿ ಸಿಡಿದು ಅರ್ಧಶತಕ ಗಳಿಸಿದರು.
ಈ ಇನಿಂಗ್ಸ್ ಬಗ್ಗೆ ಪಂದ್ಯದ ಬಳಿಕ ಮಾತನಾಡಿರುವ ಹಾರ್ದಿಕ್ ಪಾಂಡ್ಯ ಫಾರ್ಮ್ ಕಂಡುಕೊಳ್ಳಲು ಸಹಾಯ ಮಾಡಿದ ವಿರಾಟ್ ಕೊಹ್ಲಿಗೆ ಧನ್ಯವಾದ ಸಲ್ಲಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಗೆ ಮೊದಲು ವಿರಾಟ್ ಕೊಹ್ಲಿ ಜೊತೆ ಮಾತನಾಡಿದ್ದೆ. ಅವರು ನೀನು ಕೆಲವು ಹೊತ್ತು ಕ್ರೀಸ್ ನಲ್ಲಿ ಕಳೆಯಲು ಪ್ರಯತ್ನಿಸು. ಆಗ ರನ್ ತಾನಾಗೇ ಬರುತ್ತದೆ ಎಂದಿದ್ದರು. ಅವರ ಆ ಟಿಪ್ಸ್ ನನಗೆ ನೆರವಾಯಿತು. ಇದಕ್ಕೆ ಅವರಿಗೆ ಧನ್ಯವಾದ ಸಲ್ಲಿಸಬೇಕು ಎಂದಿದ್ದಾರೆ.