Publish Date: Thursday, 29 March 2018 (09:07 IST)
Updated Date: Thursday, 29 March 2018 (09:12 IST)
ಸಿಡ್ನಿ: ಆಸ್ಟ್ರೇಲಿಯಾ ಆಟಗಾರರು ಚೆಂಡು ವಿರೂಪ ಪ್ರಕರಣದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲಾಗಿದ್ದಾರೆ. ಒಂದು ಕಾಲದಲ್ಲಿ ತಮ್ಮ ಆಟದ ಮೂಲಕವೇ ವಿಶ್ವವನ್ನು ನಡುಗಿಸುತ್ತಿದ್ದ ಆಸೀಸ್ ಆಟಗಾರರು ಇಂದು ಈ ಹಂತಕ್ಕೆ ಕುಸಿಯಲು ಕಾರಣವೇನು ಗೊತ್ತಾ?
ಆಸ್ಟ್ರೇಲಿಯನ್ ಮಾಧ್ಯಮಗಳ ಪ್ರಕಾರ ತಂಡದ ಕೋಚ್ ಲೆಹಮನ್ ಅವರೇ ಕ್ರಿಕೆಟಿಗರ ಈ ದುಃಸ್ಥಿತಿಗೆ ಕಾರಣವಂತೆ. ಸದಾ ಗೆಲುವು, ಗೆಲುವು ಎಂದು ಆಟಗಾರರ ತಲೆ ತುಂಬುತ್ತಿದ್ದ ಕೋಚ್ ಲೆಹಮನ್ ಆಟಗಾರರಲ್ಲಿ ಶಿಸ್ತು ಬೆಳೆಸಲಿಲ್ಲ. ಏನಾದರೂ ಮಾಡು ಗೆಲುವು ತಂದು ಕೊಡು ಎನ್ನುವುದು ಲೆಹಮನ್ ಮಂತ್ರವಾಗಿತ್ತು.
ಇದೇ ಕಾರಣಕ್ಕೆ ಆಟಗಾರರು ಅಡ್ಡದಾರಿ ಹಿಡಿದರು. ಶಿಸ್ತು ಮರೆತರು ಎಂದು ಮಾಧ್ಯಮಗಳು ಆರೋಪಿಸಿವೆ. ಆದರೆ ಈ ಪ್ರಕರಣದಲ್ಲಿ ಕೋಚ್ ಲೆಹಮನ್ ರನ್ನು ನಿರ್ದೋಷಿ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದೆ. ಸಿಕ್ಕಿ ಬಿದ್ದಿರುವುದು ಮಾತ್ರ ಆಟಗಾರರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ