Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಕುಣಿದು ಕುಪ್ಪಳಿಸುವಾಗ ಬಾಂಗ್ಲಾ ಆಟಗಾರರು ಮಾಡಿದ್ದೇನು ಗೊತ್ತಾ?

ಭಾರತ-ಬಾಂಗ್ಲಾದೇಶ ಟಿ20
ಕೊಲೊಂಬೊ , ಸೋಮವಾರ, 19 ಮಾರ್ಚ್ 2018 (09:10 IST)
ಕೊಲೊಂಬೊ: ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಸಿಕ್ಸರ್ ಹೊಡೆದು ಗೆಲುವು ಸಾಧಿಸಿದೊಡನೆ ಟೀಂ ಇಂಡಿಯಾ ಆಟಗಾರರು ಕುಣಿದು ಕುಪ್ಪಳಿಸುತ್ತಿದ್ದರೆ ಬಾಂಗ್ಲಾ ಕ್ರಿಕೆಟಿಗರು ಏನು ಮಾಡ್ತಾ ಇದ್ದರು ಗೊತ್ತಾ?

ಸಿಕ್ಸರ್ ಬಾರಿಸಿದ ತಕ್ಷಣ ಅಂಗಳಕ್ಕೆ ನುಗ್ಗಿದ ಟೀಂ ಇಂಡಿಯಾ ಕ್ರಿಕೆಟಿಗರು ಕಾರ್ತಿಕ್ ಗೆ ಉಸಿರಾಡಲೂ ಅವಕಾಶ ಕೊಡದಂತೆ ತಬ್ಬಿ ಮುದ್ದಾಡಿದರು. ಇತ್ತ ಗ್ಯಾಲರಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದ ಭಾರತದ ಬೆಂಬಲಿಗರೂ ಹುಚ್ಚೆದ್ದು ಕುಣಿದರು.

ಭಾರತ-ಬಾಂಗ್ಲಾದೇಶ ಟಿ20
ಆದರೆ ಅತ್ತ ಕೈಗೆ ಬಂದ ತುತ್ತು ಬಾಯಿಗೆ ಬರದ ಬೇಸರದಲ್ಲಿ ಅಂತಿಮ ಓವರ್ ಎಸೆದ ಬಾಂಗ್ಲಾ ಬೌಲರ್ ಸೌಮ್ಯ ಸರ್ಕಾರ್ ಕುಸಿದು ಕೂತು ಕಣ್ಣೀರು ಹಾಕಿದರು. ಅತ್ತ ಡಗ್ ಔಟ್ ನಲ್ಲಿದ್ದ ಬಾಂಗ್ಲಾ ಕ್ರಿಕೆಟಿಗರ ಕಣ್ಣೂ ತುಂಬಿ ಬಂದಿತ್ತು. ಒಂದು ವೇಳೆ ಗೆದ್ದಿದ್ದರೆ ಬಾಂಗ್ಲಾ ಆಟಗಾರರ ಸಂಭ್ರಮಕ್ಕೆ ಮೇರೆ ಇರುತ್ತಿರಲಿಲ್ಲ. ಆದರೆ ಕೊನೆಯ  ಹಂತದಲ್ಲಿ ಗೆಲುವು ಕೈ ಜಾರಿದ ನಿರಾಸೆ ಅವರಲ್ಲಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ            

Share this Story:

Follow Webdunia kannada

ಮುಂದಿನ ಸುದ್ದಿ

ಬಾಂಗ್ಲಾ ಸೋಲಿಸಲು ಲಂಕಾ ಅಭಿಮಾನಿಗಳಿಂದ ಟೀಂ ಇಂಡಿಯಾಕ್ಕೆ ಸಪೋರ್ಟ್! ಕಾರಣವೇನು ಗೊತ್ತಾ?