Publish Date: Mon, 19 Mar 2018 (09:05 IST)
Updated Date: Mon, 19 Mar 2018 (09:09 IST)
ಕೊಲೊಂಬೊ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ತ್ರಿಕೋನ ಟಿ20 ಸರಣಿ ಫೈನಲ್ ಪಂದ್ಯದಲ್ಲಿ ಲಂಕಾ ಅಭಿಮಾನಿಗಳು ಭಾರತೀಯ ಅಭಿಮಾನಿಗಳಿಗಿಂತ ಹೆಚ್ಚು ಟೀಂ ಇಂಡಿಯಾಕ್ಕೆ ಚಿಯರ್ ಅಪ್ ಮಾಡುತ್ತಿದ್ದರು.
ಇದಕ್ಕೆ ಕಾರಣವೂ ಇದೆ. ಕೊನೆಯ ಲೀಗ್ ಪಂದ್ಯದಲ್ಲಿ ಲಂಕಾ ಕ್ರಿಕೆಟಿಗರೊಂದಿಗೆ ಗೆಲುವಿನ ಹೊಸ್ತಿಲಲ್ಲಿ ಕಾದಾಡಿ ಪಂದ್ಯವನ್ನೇ ಬಹಿಷ್ಕರಿಸಲು ಬಾಂಗ್ಲಾ ಆಟಗಾರರು ಸಜ್ಜಾಗಿದ್ದರು. ಅಷ್ಟೇ ಅಲ್ಲ, ಸಮಾಧಾನಿಸಲು ಬಂದ ಲಂಕಾ ನಾಯಕನ ಮೇಲೆ ಹರಿಹಾಯ್ದಿದ್ದರು. ಇದಾದ ಬಳಿಕ ಡ್ರೆಸ್ಸಿಂಗ್ ರೂಂ ಗಾಜು ಪುಡಿ ಮಾಡಿ ಪುಂಡಾಟ ಮೆರೆದಿದ್ದರು.
ಇದೇ ರೋಷ ಲಂಕಾ ಅಭಿಮಾನಿಗಳಲ್ಲಿತ್ತು. ಹಾಗಾಗಿ ಫೈನಲ್ ಪಂದ್ಯಕ್ಕೆ ಹೆಚ್ಚು ಸಂಖ್ಯೆಯಲ್ಲಿ ಹಾಜರಿದ್ದ ಲಂಕಾ ಅಭಿಮಾನಿಗಳು ಟೀಂ ಇಂಡಿಯಾಕ್ಕೆ ಹುಚ್ಚೆದ್ದು ಕುಣಿದು ಪ್ರೋತ್ಸಾಹ ಕೊಡುತ್ತಿದ್ದರು. ಇದೇ ಕಾರಣಕ್ಕೆ ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಮೈದಾನಕ್ಕೆ ಸುತ್ತ ಹೊಡೆದು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ