Webdunia - Bharat's app for daily news and videos

Install App

ಹಾರ್ದಿಕ್ ಪಾಂಡ್ಯ ಅಮೆರಿಕಾಗೆ ತೆರಳಿದ ಬೆನ್ನಲ್ಲೇ ಮುಂಬೈ ನಿವಾಸದಿಂದ ಹೊರಬಂದ ನತಾಶಾ

Krishnaveni K
ಬುಧವಾರ, 29 ಮೇ 2024 (14:21 IST)
Photo Credit: X
ಮುಂಬೈ: ಅತ್ತ ಟೀಂ ಇಂಡಿಯಾ ಜೊತೆ ಟಿ20 ವಿಶ್ವಕಪ್ ಆಡಲು ಹಾರ್ದಿಕ್ ಪಾಂಡ್ಯ ಅಮೆರಿಕಾಗೆ ತೆರಳಿದ್ದರೆ ಇತ್ತ ಅವರ ಪತ್ನಿ ನತಾಶಾ ಮುಂಬೈನ ಹಾರ್ದಿಕ್ ನಿವಾಸದಿಂದ ಜಾಗ ಖಾಲಿ ಮಾಡಿದ್ದಾರೆ ಎಂದು ವರದಿಯಾಗುತ್ತಿದೆ.

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ವಿಚ್ಛೇದನಕ್ಕೊಳಗಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಇಬ್ಬರೂ ಈಗ ಜೊತೆಯಾಗಿಲ್ಲ ಎನ್ನಲಾಗಿದೆ. ಇದಕ್ಕೆ ಕಾರಣ ಇಬ್ಬರ ನಡುವಳಿಕೆ ಮತ್ತು ಸೋಷಿಯಲ್ ಮೀಡಿಯಾ ಚಟುವಟಿಕೆಗಳು.

ಮಾರ್ಚ್ 4 ರಂದು ನತಾಶಾ ಹುಟ್ಟುಹಬ್ಬಕ್ಕೆ ಪ್ರತಿವರ್ಷದಂತೆ ಹಾರ್ದಿಕ್ ಶುಭ ಕೋರಿರಲಿಲ್ಲ. ಅಲ್ಲದೆ ಇತ್ತೀಚೆಗೆ ತನ್ನ ಮತ್ತು ಹಾರ್ದಿಕ್ ಜೊತೆಗಿನ ಎಲ್ಲಾ ಫೋಟೋಗಳನ್ನು ಸೋಷಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದರು. ಜೊತೆಗೆ ತಮ್ಮ ಹೆಸರಿನ ಜೊತೆಗಿದ್ದ ಪಾಂಡ್ಯ ಸರ್ ನೇಮ್ ನ್ನೂ ಕಿತ್ತು ಹಾಕಿದ್ದರು.

ಇದೆಲ್ಲಾ ಬೆಳವಣಿಗೆ ಜೊತೆ ನತಾಶಾ ಮುಂಬೈನಲ್ಲಿ ದಿಶಾ ಪಟಾನಿ ಮಾಜಿ ಗೆಳೆಯ ಅಲೆಕ್ಸಾಂಡರ್ ಅಲೆಕ್ಸ್ ಜೊತೆ ಕಾಣಿಸಿಕೊಂಡಿದ್ದು ಎಲ್ಲರೂ ಹುಬ್ಬೇರುವಂತೆ ಮಾಡಿತ್ತು. ಈ ವೇಳೆ ಹಾರ್ದಿಕ್ ಜೊತೆಗಿನ ವಿರಸದ ಬಗ್ಗೆ ಪ್ರಶ್ನಿಸಿದಾಗ ನತಾಶಾ ಏನನ್ನೂ ಹೇಳಲಿಲ್ಲ. ಅಲ್ಲದೆ, ಐಪಿಎಲ್ ಮುಗಿದೊಡನೆ ಹಾರ್ದಿಕ್ ಏಕಾಂಗಿಯಾಗಿ ವಿದೇಶ ಪ್ರವಾಸ ಮಾಡಿದ್ದರು.

ಇದೆಲ್ಲದರ ಹಿನ್ನಲೆಯಲ್ಲಿ ಇಬ್ಬರೂ ದೂರವಾಗುತ್ತಿರುವುದು ಖಚಿತ ಎನ್ನಲಾಗಿದೆ. ಇದರ ನಡುವೆ ಹಾರ್ದಿಕ್ ಅಮೆರಿಕಾಗೆ ಟಿ20 ವಿಶ್ವಕಪ್ ಆಡಲು ತೆರಳಿದ ಬೆನ್ನಲ್ಲೇ ನತಾಶಾ ತಮ್ಮ ವಸ್ತುಗಳನ್ನು ಮುಂಬೈನ ಹಾರ್ದಿಕ್ ನಿವಾಸದಿಂದ ತೆರವುಗೊಳಿಸಿದ್ದಾರೆ ಎಂಬ ಸುದ್ದಿಯಿದೆ.  ಈ ಎಲ್ಲಾ ಹಿನ್ನಲೆಯಲ್ಲಿ ದಂಪತಿ ದೂರವಾಗುತ್ತಿರುವುದು ಖಚಿತ ಎನ್ನಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ

ಪಂದ್ಯ ನಿಂತ್ರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಿರಾಕಲ್‌ಗೆ ಕೊಹ್ಲಿ ಅಭಿಮಾನಿಗಳು ಫುಲ್ ಖುಷ್‌, Video Viral

ಮುಂದಿನ ಸುದ್ದಿ
Show comments