Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗೆದ್ದ ಟೀಂ ಇಂಡಿಯಾಗೆ ಅವಮಾನ: ಪ್ರಶಸ್ತಿ ಸಮಾರಂಭದಲ್ಲಿ ಕೊಹ್ಲಿ ಅಸಮಾಧಾನ

ಗೆದ್ದ ಟೀಂ ಇಂಡಿಯಾಗೆ ಅವಮಾನ: ಪ್ರಶಸ್ತಿ ಸಮಾರಂಭದಲ್ಲಿ ಕೊಹ್ಲಿ ಅಸಮಾಧಾನ
ಪುಣೆ , ಸೋಮವಾರ, 29 ಮಾರ್ಚ್ 2021 (09:13 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯನ್ನು ಗೆದ್ದ ಟೀಂ ಇಂಡಿಯಾಗೆ ತಕ್ಕ ಪುರಸ್ಕಾರ ಸಿಗದೇ ಇರುವುದು ನಾಯಕ ವಿರಾಟ್ ಕೊಹ್ಲಿಯ ಅಸಮಾಧಾನಕ್ಕೆ ಕಾರಣವಾಗಿದೆ.
Photo Courtesy: Google


ಸಾಮಾನ್ಯವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ, ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ತಂಡದ ಪಾಲಾಗುತ್ತದೆ. ಆದರೆ ಈ ಸರಣಿಯಲ್ಲಿ ಎರಡೂ ಪ್ರಶಸ್ತಿಗಳನ್ನೂ ಭಾರತ ತಂಡದಲ್ಲಿ ಅರ್ಹರಿದ್ದರೂ ಎದುರಾಳಿ ತಂಡಕ್ಕೆ ನೀಡಲಾಗಿದೆ. ನಿನ್ನೆಯ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿ ಇಂಗ್ಲೆಂಡ್ ನ ಸ್ಯಾಮ್ ಕ್ಯುರೇನ್ ಗೆ ನೀಡಲಾಗಿದ್ದರೆ, ಈ ಸರಣಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಇಂಗ್ಲೆಂಡ್ ತಂಡದ ಜಾನಿ ಬೇರ್ ಸ್ಟೋಗೆ ನೀಡಲಾಗಿದೆ. ಇದು ಕೊಹ್ಲಿ ಅಸಮಾಧಾನಕ್ಕೆ ಗುರಿಯಾಗಿದೆ.

ಪ್ರಶಸ್ತಿ ಸಮಾರಂಭದಲ್ಲಿ ಕೊಹ್ಲಿ ಈ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ‘ಶ್ರಾದ್ಧೂಲ್ ಗೆ ಪಂದ್ಯ ಶ್ರೇಷ್ಠ ಮತ್ತು ಈ ಸರಣಿಯುದ್ದಕ್ಕೂ ಕಡಿಮೆ ಎಕಾನಮಿ ರೇಟ್ ನಲ್ಲಿ ಬೌಲಿಂಗ್ ಮಾಡಿ ವಿಕೆಟ್ ಕಿತ್ತ ಭುವನೇಶ್ವರ್ ಕುಮಾರ್ ಗೆ ಸರಣಿ ಶ್ರೇಷ್ಠ ಪ್ರಶಸ್ತಿ ಕೊಡದೇ ಇರುವುದು ನನಗೆ ಅಚ್ಚರಿಯಾಗಿದೆ’ ಎಂದು ಕಿಡಿ ಕಾರಿದ್ದಾರೆ. ಶ್ರಾದ್ಧೂಲ್ ನಿನ್ನೆಯ ಪಂದ್ಯದಲ್ಲಿ ಇಂಗ್ಲೆಂಡ್ ನ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿದ್ದಲ್ಲದೆ, ಬ್ಯಾಟಿಂಗ್ ನಲ್ಲೂ 21 ಎಸೆತಗಳಲ್ಲಿ 30 ರನ್ ಗಳಿಸಿ ಭಾರತದ ಮೊತ್ತ 300 ರ ಗಡಿ ದಾಟಲು ಕಾರಣರಾಗಿದ್ದರು. ಗೆದ್ದ ತಂಡದ ಸಾಧಕರನ್ನು ಕಡೆಗಣಿಸಿ ಸೋತ ತಂಡಕ್ಕೆ ಸನ್ಮಾನ ಮಾಡಿರುವುದು ಕೊಹ್ಲಿ ಮಾತ್ರವಲ್ಲದೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಮೂರೂ ಸರಣಿ ಗೆದ್ದು ಟೀಂ ಇಂಡಿಯಾ ದಾಖಲೆ