ಮುಂಬೈ: ಟೀಂ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿಯ ಮನವಿಯನ್ನು ಪುರಸ್ಕರಿಸಿರುವ ಬಿಸಿಸಿಐ ಈ ಐಪಿಎಲ್ ನಿಂದ ಅಂಪಾಯರ್ ಗಳ ಸಾಫ್ಟ್ ಸಿಗ್ನಲ್ ಅಧಿಕಾರವನ್ನೇ ಮೊಟಕುಗೊಳಿಸಿದೆ.
ಅಂಪಾಯರ್ ಗಳು ಅನುಮಾನವಿದ್ದಾಗ ಔಟ್ ತೀರ್ಪು ನೀಡಲು ಥರ್ಡ್ ಅಂಪಾಯರ್ ಕಡೆಗೆ ಸೂಚನೆ ನೀಡುವ ಮೊದಲು ಸಾಫ್ಟ್ ಸಿಗ್ನಲ್ ನೀಡುವುದು ಇನ್ನು ಮುಂದೆ ಐಪಿಎಲ್ ನಲ್ಲಿ ಇರಲ್ಲ.
ಇದರ ಬಗ್ಗೆ ವಿರಾಟ್ ಕೊಹ್ಲಿ ಈ ಮೊದಲು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ಈ ವ್ಯವಸ್ಥೆಯನ್ನು ಕಿತ್ತು ಹಾಕಬೇಕು ಎಂದು ಆಗ್ರಹಿಸಿದ್ದರು. ಕೊಹ್ಲಿ ಮನವಿಗೆ ಸ್ಪಂದಿಸಿರುವ ಬಿಸಿಸಿಐ ಐಪಿಎಲ್ 14 ರಲ್ಲಿ ಆನ್ ಫೀಲ್ಡ್ ಅಂಪಾಯರ್ ಗಳಿಗೆ ಇರುವ ಈ ಅಧಿಕಾರವನ್ನು ಮೊಟಕುಗೊಳಿಸಿದೆ.