Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತ-ಇಂಗ್ಲೆಂಡ್ ಮೂರೂ ಸರಣಿ ಗೆದ್ದು ಟೀಂ ಇಂಡಿಯಾ ದಾಖಲೆ

ಭಾರತ-ಇಂಗ್ಲೆಂಡ್ ಮೂರೂ ಸರಣಿ ಗೆದ್ದು ಟೀಂ ಇಂಡಿಯಾ ದಾಖಲೆ
ಪುಣೆ , ಸೋಮವಾರ, 29 ಮಾರ್ಚ್ 2021 (09:06 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ನಿರ್ಣಾಯಕ ಏಕದಿನ ಪಂದ್ಯವನ್ನು 7 ರನ್ ಗಳಿಂದ ರೋಚಕವಾಗಿ ಗೆದ್ದ ಟೀಂ ಇಂಡಿಯಾ ಹೊಸ ದಾಖಲೆಯೊಂದನ್ನು ಮಾಡಿದೆ.


ನಿನ್ನೆ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕರಾದ ಶಿಖರ್ ಧವನ್ (67), ರೋಹಿತ್ ಶರ್ಮಾ (37), ರಿಷಬ್ ಪಂತ್ (78), ಹಾರ್ದಿಕ್ ಪಾಂಡ್ಯ (64) ಭರ್ಜರಿ ಬ್ಯಾಟಿಂಗ್ ನಿಂದ ಟೀಂ ಇಂಡಿಯಾ 329 ರನ್ ಗಳಿಸಿ 48.2 ಓವರ್ ಗಳಲ್ಲಿ ಆಲೌಟ್ ಆಯಿತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಏಳನೇ ಕ್ರಮಾಂಕದಲ್ಲಿ ವೇಗಿ ಸ್ಯಾಮ್ ಕ್ಯುರೇನ್ ಸಾಹಸದಿಂದಾಗಿ ಗೆಲ್ಲುವ ಸೂಚನೆ ನೀಡಿತ್ತು. 83 ಎಸೆತಗಳಿಂದ ಅಜೇಯ 95 ರನ್ ಗಳಿಸಿದ ಕ್ಯುರೇನ್ ಪಂದ್ಯವನ್ನು ಭಾರತದಿಂದ ಕಸಿಯುವವರಿದ್ದರು. ಆದರೆ ಅಂತಿಮ ಐದು ಓವರ್ ಗಳಲ್ಲಿ ಭಾರತೀಯ ಬೌಲರ್ ಗಳ ಬಿಗಿ ದಾಳಿಯಿಂದಾಗಿ ಇಂಗ್ಲೆಂಡ್ ಅಂತಿಮವಾಗಿ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 322 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದರೊಂದಿಗೆ ಭಾರತ ಇಂಗ್ಲೆಂಡ್ ವಿರುದ್ಧ ಟೆಸ್ಟ್, ಟಿ20 ಮತ್ತು ಏಕದಿನ ಸರಣಿ ಮೂರನ್ನೂ ಗೆದ್ದು ಎರಡನೇ ಬಾರಿ ಮೂರೂ ಮಾದರಿಯಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದ ದಾಖಲೆ ಮಾಡಿತು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಅಂತಿಮ ಏಕದಿನ: ಮತ್ತೆ ಕೊಹ್ಲಿ ಬೆಂಬಿಡದ ದುರಾದೃಷ್ಟ