Publish Date: Sun, 01 Apr 2018 (05:07 IST)
Updated Date: Sun, 01 Apr 2018 (05:12 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ 2017 ರಲ್ಲಿ ಅತ್ಯಂತ ಹೆಚ್ಚು ಚಾಲ್ತಿಯಲ್ಲಿದ್ದ ಇನ್ ಸ್ಟಾಗ್ರಾಂ ಅವಾರ್ಡ್ ಸಿಕ್ಕಿದ್ದು ಅದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
‘ನನಗೆ ಈ ಅವಾರ್ಡ್ ಸಿಕ್ಕಲು ಕಾರಣರಾದ ನಿಮಗೆ ಧನ್ಯವಾದಗಳು. ನಾನು ಥ್ಯಾಂಕ್ಸ್ ಹೇಳುವುದು ಕೊಂಚ ತಡವಾಯಿತು ಎಂದು ನನಗೆ ಗೊತ್ತು. ಹಾಗಿದ್ದರೂ ನಿಮ್ಮೆಲ್ಲರಿಗೂ ನಾನು ಅಭಾರಿಯಾಗಿದ್ದೇನೆಂದು ಈ ಮೂಲಕ ತಿಳಿಸುತ್ತೇನೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ಕೊಹ್ಲಿ ಐಪಿಎಲ್ ಗಾಗಿ ಸಜ್ಜಾಗುತ್ತಿದ್ದಾರೆ. 2017 ರಲ್ಲಿ ವೈಯಕ್ತಿಕ ಬದುಕು, ವೃತ್ತಿ ಜೀವನದ ಹಲವು ಮೈಲಿಗಲ್ಲುಗಳಿಂದಾಗಿ ಕೊಹ್ಲಿ ಸದಾ ಸುದ್ದಿಯಲ್ಲಿದ್ದರು. ಇದರ ಹಿನ್ನಲೆಯಲ್ಲಿ ಕೊಹ್ಲಿ ಇನ್ ಸ್ಟಾಗ್ರಾಂ ಪುಟವೂ ಸಕ್ರಿಯವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ