ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ತಮ್ಮ ಸಾಮರ್ಥ್ಯ ನಿರೂಪಿಸಲು ನಾಯಕ ವಿರಾಟ್ ಕೊಹ್ಲಿ ರೆಡಿಯಾಗಿದ್ದಾರೆ ಎಂದು ಕೋಚ್ ರವಿಶಾಸ್ತ್ರಿ ಹೇಳಿಕೊಂಡಿದ್ದಾರೆ.
ಕಳೆದ ಬಾರಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾರೆ ಕೊಹ್ಲಿ ಐದು ಟೆಸ್ಟ್ ಪಂದ್ಯಗಳಿಂದ 13.50 ಸರಾಸರಿಯಲ್ಲಿ ರನ್ ಗಳಿಸಿ ತೀರಾ ಕಳಪೆ ಎನಿಸಿದ್ದರು. ಆದರೆ ಈ ಬಾರಿ ಅವರು ಬದಲಾಗಿದ್ದಾರೆ. ಅವರ ಪ್ರದರ್ಶನವೂ ಅಂದಿನಂತೆ ಇರಲ್ಲ ಎಂದು ರವಿಶಾಸ್ತ್ರಿ ಭರವಸೆ ನೀಡಿದ್ದಾರೆ.
‘ಕಳೆದ ನಾಲ್ಕು ವರ್ಷಗಳಲ್ಲಿ ಕೊಹ್ಲಿ ತುಂಬಾ ಅನುಭವ ಗಳಿಸಿದ್ದಾರೆ. ಅವರ ದಾಖಲೆಗಳನ್ನೇ ನೋಡಿ. ಆ ರೀತಿ ರನ್ ಗಳಿಸಿದ ಮೇಲೆ ಅವರ ಮಾನಸಿಕ ಸ್ಥಿತಿಯೇ ಬೇರೆ ಇರುತ್ತದೆ. ಯಾವುದೇ ಪರೀಕ್ಷೆ ಬಂದರೂ ಎದುರಿಸಲು ಸಿದ್ಧರಾಗಿರುತ್ತಾರೆ. ಈ ಬಾರಿ ಬ್ರಿಟಿಷ್ ಅಭಿಮಾನಿಗಳ ಎದುರು ತಾವೇನೆಂದು ಅವರು ತೋರಿಸಿಯೇ ಬಿಡುತ್ತಾರೆ’ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಭಾರತ ಕೂಡಾ ಈ ಸರಣಿಯನ್ನು ಡ್ರಾ ಮಾಡಿಕೊಳ್ಳಲು ಅಲ್ಲ, ಗೆಲ್ಲಲೆಂದೇ ಆಡುತ್ತಿದೆ. ಈ ಸರಣಿಯ ಮೂಲಕ ಭಾರತ ಅತ್ಯಂತ ಬೆಸ್ಟ್ ಪ್ರವಾಸಿ ತಂಡ ಎಂಬ ಖ್ಯಾತಿ ಗಳಿಸುತ್ತದೆ ಎಂದು ಕೋಚ್ ಭರವಸೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.