Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಯುವ ಕ್ರಿಕೆಟಿಗರಿಗೆ ಹಲವು ರೀತಿಯಲ್ಲಿ ಆದರ್ಶಪ್ರಾಯರು. ಯುವ ಕ್ರಿಕೆಟಿಗ ಶ್ರೇಯಸ್ ಐಯರ್ ತಮಗೆ ಧೋನಿ ನೀಡಿದ ಸಲಹೆಯೊಂದನ್ನು ಸ್ಮರಿಸಿಕೊಂಡಿದ್ದಾರೆ.
‘ನಾನು ಟೀಂ ಇಂಡಿಯಾಗೆ ಆಯ್ಕೆಯಾದಾಗ ಧೋನಿ ನನಗೆ ಯಾವುದೇ ರೀತಿಯ ಪತ್ರಿಕೆ, ಮಾಧ್ಯಮಗಳ ಸುದ್ದಿಗಳನ್ನು ಓದಬೇಡ. ಇದರಿಂದ ಏಕಾಗ್ರತೆಗೆ ಭಂಗವಾಗಲ್ಲ ಎಂದು ಸಲಹೆ ನೀಡಿದ್ರು. ಎಷ್ಟು ಸಾಧ್ಯವೋ ಅಷ್ಟು ಸೋಷಿಯಲ್ ಮೀಡಿಯಾದಿಂದ ದೂರವಿರು ಎಂದು ಸಲಹೆ ನೀಡಿದ್ದರು’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿರುವುದರ ಪರಿಣಾಮ ತಾವು ಎದುರಿಸಿದ ಘಟನೆಯೊಂದನ್ನೂ ಶ್ರೇಯಸ್ ಈ ಸಂದರ್ಭದಲ್ಲಿ ವಿವರಿಸಿದ್ದಾರೆ. ‘ಐಪಿಎಲ್ ಹರಾಜು ಮುಗಿದ ಮೇಲೆ ನನಗೆ ಮೊದಲೇ ಗೊತ್ತಿದ್ದ ಹುಡುಗಿಯೊಬ್ಬಳು ಆಗಾಗ ಮೆಸೇಜ್ ಮಾಡಲು ಶುರು ಮಾಡಿದಳು. ನಾನು ಆಕೆಯನ್ನು ಪ್ರಶ್ನಿಸಿದಾಗ ಐಪಿಎಲ್ ಹರಾಜಿನ ಬಗ್ಗೆ ಹೇಳಿದಳು. ಆಗ ನನಗೆ ಗೊತ್ತಾಯಿತು, ಆಕೆ ನನಗೆ ಸಿಕ್ಕಿದ ಶ್ರೀಮಂತಿಕೆ ನೋಡಿ ನನ್ನ ಹಿಂದೆ ಬಿದ್ದಿದ್ದಾಳೆಂದು’ ಎಂದು ಸೋಷಿಯಲ್ ಮೀಡಿಯಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.