Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದಿನೇಶ್ ಕಾರ್ತಿಕ್ ಮಾಜಿ ಪತ್ನಿಯ ಪತಿ, ಕ್ರಿಕೆಟಿಗ ಮುರಳಿ ವಿಜಯ್ ಟ್ವೀಟ್ ನೋಡಿ ಅಭಿಮಾನಿಗಳು ಸಿಟ್ಟಿಗೆದ್ದಿದ್ದೇಕೆ?

ದಿನೇಶ್ ಕಾರ್ತಿಕ್ ಮಾಜಿ ಪತ್ನಿಯ ಪತಿ, ಕ್ರಿಕೆಟಿಗ ಮುರಳಿ ವಿಜಯ್ ಟ್ವೀಟ್ ನೋಡಿ ಅಭಿಮಾನಿಗಳು ಸಿಟ್ಟಿಗೆದ್ದಿದ್ದೇಕೆ?
ಚೆನ್ನೈ , ಬುಧವಾರ, 21 ಮಾರ್ಚ್ 2018 (09:04 IST)
ಚೆನ್ನೈ: ಟೀಂ ಇಂಡಿಯಾ ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಸಾಹಸದಿಂದ ಗೆಲುವು ಸಾಧಿಸಿದ್ದಕ್ಕೆ ಕ್ರಿಕೆಟ್ ಜಗತ್ತೇ ಅವರನ್ನು ಕೊಂಡಾಡಿತ್ತು. ಆದರೆ ಕಾರ್ತಿಕ್ ಮಾಜಿ ಪತ್ನಿಯ ಹಾಲಿ ಪತಿ ಮುರಳಿ ವಿಜಯ್ ಮಾಡಿದ ಟ್ವೀಟ್ ಅಭಿಮಾನಿಗಳನ್ನು ಕೆರಳಿಸಿದೆ.

ಕಾರ್ತಿಕ್ ಮತ್ತು ಟೆಸ್ಟ್ ತಂಡದ ಆರಂಭಿಕ ವಿಜಯ್ ಒಂದು ಕಾಲದಲ್ಲಿ ಉತ್ತಮ ಸ್ನೇಹಿತರಾಗಿದ್ದರು. ಆದರೆ ಕಾರ್ತಿಕ್ ಪತ್ನಿಯಾಗಿದ್ದ ನಿಖಿತಾರನ್ನು ಮುರಳಿ ವಿಜಯ್ ಪ್ರೀತಿಸಿ ಮದುವೆಯಾದ ಮೇಲೆ ಇವರಿಬ್ಬರ ನಡುವಿನ ವೈಯಕ್ತಿಕ ಸಂಬಂಧ ಹಾಳಾಗಿತ್ತು.

ಹೀಗಾಗಿ ಮೊನ್ನೆ ಭಾರತ ಗೆದ್ದ ಮೇಲೆ ಟ್ವೀಟ್ ಮಾಡುವಾಗ ವಿಜಯ್ ಬೇಕೆಂದೇ ಕಾರ್ತಿಕ್ ಹೆಸರನ್ನು ಪ್ರಸ್ತಾಪಿಸದೇ ಕೇವಲ ಟೀಂ ಇಂಡಿಯಾಗೆ ಮಾತ್ರ ಅಭಿನಂದನೆ ಸಲ್ಲಿಸಿದ್ದರು. ಇದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ನಿಮ್ಮ ವೈಯಕ್ತಿಕ ಧ್ವೇಷ ಮರೆತು ವೃತ್ತಿಪರವಾಗಿ ಯೋಚಿಸಿ ಎಂದು ಒಬ್ಬರು ಟೀಕಿಸಿದರೆ ಇನ್ನೊಬ್ಬರು, ಕಾರ್ತಿಕ್ ಗೆ ಅಭಿನಂದನೆ ಸಲ್ಲಿಸದೇ ಈ ಸಂದೇಶ ಅಪೂರ್ಣ ಎಂದಿದ್ದಾರೆ. ಕಾರ್ತಿಕ್ ಮೇಲೆ ಸ್ವಲ್ಪವಾದರೂ ಗೌರವ ತೋರಿಸಬೇಕಿತ್ತು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

Share this Story:

Follow Webdunia kannada

ಮುಂದಿನ ಸುದ್ದಿ

ದಿನೇಶ್ ಕಾರ್ತಿಕ್ ಗೆಲುವಿನ ಸಿಕ್ಸರ್ ಸಿಡಿಸುತ್ತಿರುವಾಗ ನಾಯಕ ರೋಹಿತ್ ಶರ್ಮಾ ಏನು ಮಾಡ್ತಾ ಇದ್ದರು ಗೊತ್ತಾ?