Publish Date: Fri, 21 Jan 2022 (16:29 IST)
Updated Date: Fri, 21 Jan 2022 (16:32 IST)
Photo Courtesy: Star Sports
ಪಾರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ.
ಮೂರನೇ ವಿಕೆಟ್ ಗೆ ನಾಯಕ ಕೆಎಲ್ ರಾಹುಲ್ ಗೆ ಜೊತೆಯಾಗಿರುವ ರಿಷಬ್ ಬೌಂಡರಿ-ಸಿಕ್ಸರ್ ಮೂಲಕ ಎದುರಾಳಿಗಳಿಗೆ ತಲೆನೋವಾಗಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ರಿಷಬ್ 65 ಎಸೆತಗಳಲ್ಲಿ 83 ರನ್ ಗಳಿಸಿದ್ದಾರೆ.
ರಿಷಬ್ ಬ್ಯಾಟಿಂಗ್ ಎಷ್ಟು ಮನಮೋಹಕವಾಗಿತ್ತೆಂದರೆ ಪೆವಿಲಿಯನ್ ನಲ್ಲಿ ಕೂತಿದ್ದ ವಿರಾಟ್ ಕೊಹ್ಲಿ ನೃತ್ಯವನ್ನೇ ಮಾಡಿದ್ದಾರೆ. ರಿಷಬ್ ಬೌಂಡರಿಯೊಂದಕ್ಕೆ ಕೊಹ್ಲಿ ಕೂತಲ್ಲಿಯೇ ಡ್ಯಾನ್ಸ್ ಮಾಡಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರತ ಇತ್ತೀಚೆಗಿನ ವರದಿ ಬಂದಾಗ 3 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿದೆ. ನಾಯಕ ಕೆಎಲ್ ರಾಹುಲ್ 55 ರನ್ ಗಳಿಸಿ ಔಟಾಗಿದ್ದಾರೆ.