Publish Date: Fri, 27 Oct 2023 (09:25 IST)
Updated Date: Fri, 27 Oct 2023 (09:25 IST)
ಲಕ್ನೋ: ಇಂಗ್ಲೆಂಡ್ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯವಾಡಲು ಲಕ್ನೋಗೆ ಬಂದಿಳಿದ ಟೀಂ ಇಂಡಿಯಾ ಲಕ್ನೋದಲ್ಲಿ ನಿನ್ನೆ ಸಂಜೆಯಿಂದ ಅಭ್ಯಾಸ ಆರಂಭಿಸಿದೆ.
ರೋಹಿತ್ ಪಡೆ ಮೊನ್ನೆಯೇ ಲಕ್ನೋಗೆ ಬಂದಿಳಿದಿತ್ತು. ಒಂದು ದಿನದ ವಿಶ್ರಾಂತಿ ಬಳಿಕ ನಿನ್ನೆ ಸಂಜೆಯಿಂದ ಅಭ್ಯಾಸ ಆರಂಭಿಸಿದೆ. ವಿಶೇಷವೆಂದರೆ ಸ್ಟಾರ್ ಬ್ಯಾಟಿಗ ವಿರಾಟ್ ಕೊಹ್ಲಿ ನೆಟ್ಸ್ ನಲ್ಲಿ ಶುಬ್ಮನ್ ಗಿಲ್ ಗೆ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ.
ಕೊಹ್ಲಿ ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಗಾಯಗೊಂಡಾಗ ಅವರ ಓವರ್ ಪೂರ್ತಿ ಮಾಡಲು ಬೌಲಿಂಗ್ ಮಾಡಿದ್ದರು. ಅಂತಾರಾಷ್ಟ್ರೀಯ ಪಂದ್ಯಗಲ್ಲಿ ಇದಕ್ಕೆ ಮೊದಲೂ ಕೊಹ್ಲಿ ಬೌಲಿಂಗ್ ಮಾಡಿದ್ದಾರೆ. ಈಗ ನೆಟ್ಸ್ ನಲ್ಲಿ ಬೌಲಿಂಗ್ ಮಾಡುತ್ತಿರುವುದು ನೋಡಿದರೆ ಮತ್ತೆ ಅವಕಾಶ ಸಿಕ್ಕರೆ ಬೌಲಿಂಗ್ ಗೂ ಸೈ ಎಂದು ಮ್ಯಾನೇಜ್ ಮೆಂಟ್ ಗೆ ಸಂದೇಶ ಮುಟ್ಟಿಸಿದಂತಿದೆ.
Krishnaveni K
Publish Date: Fri, 27 Oct 2023 (09:25 IST)
Updated Date: Fri, 27 Oct 2023 (09:25 IST)