Publish Date: Fri, 27 Oct 2023 (08:30 IST)
Updated Date: Fri, 27 Oct 2023 (08:48 IST)
ಲಕ್ನೋ: ಏಕದಿನ ವಿಶ್ವಕಪ್ ಗೆಲ್ಲುವ ಕನಸು ಹೊತ್ತು ಭರ್ಜರಿ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾಗೆ ಹಾರ್ದಿಕ್ ಪಾಂಡ್ಯ ರೂಪದಲ್ಲಿ ಆಘಾತ ಸಿಕ್ಕಿದೆ.
ಹಾರ್ದಿಕ್ ಪಾಂಡ್ಯ ಕಾಲಿನ ಗಾಯಕ್ಕೊಳಗಾಗಿರುವುದರಿಂದ ಇನ್ನು ಕೆಲವು ಪಂದ್ಯಗಳಲ್ಲಿ ಅಲಭ್ಯರಾಗಲಿದ್ದಾರೆ. ಅವರ ಸ್ಥಾನಕ್ಕೆ ತಂಡದಲ್ಲಿ ಸೂಕ್ತ ಆಲ್ ರೌಂಡರ್ ಯಾರು ಎಂಬ ಪ್ರಶ್ನೆ ಮೂಡಿದೆ.
ಮುಂದಿನ ಪಂದ್ಯ ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿದೆ. ಈ ಮೈದಾನ ಸ್ಪಿನ್ ಸ್ನೇಹಿಯಾಗಿರುವುದರಿಂದ ಪಾಂಡ್ಯ ಜಾಗಕ್ಕೆ ಹಿರಿಯ ಸ್ಪಿನ್ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಬರುವ ಸಾಧ‍್ಯತೆಯಿದೆ. ಅಶ್ವಿನ್ ಸಂಕಷ್ಟದ ಸಮಯದಲ್ಲಿ ಬ್ಯಾಟಿಂಗ್ ಕೂಡಾ ಮಾಡಬಲ್ಲರು. ಹೀಗಾಗಿ ಹಾರ್ದಿಕ್ ಬದಲಿಗೆ ಸದ್ಯಕ್ಕೆ ಅವರೇ ತಂಡಕ್ಕೆ ಬರುವ ಸಾಧ‍್ಯತೆಯಿದೆ. ಒಂದು ವೇಳೆ ಪಿಚ್ ವೇಗಿಗಳಿಗೆ ನೆರವಾಗುತ್ತಿದ್ದರೆ ಶಾರ್ದೂಲ್ ಠಾಕೂರ್ ಗೆ ಅವಕಾಶ ಸಿಗಲಿದೆ.