ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದು ಇತ್ತೀಚೆಗಿನ ವರದಿ ಬಂದಾಗ ನ್ಯೂಜಿಲೆಂಡ್ 2 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದೆ.
ಆದರೆ ಮೊದಲ ವಿಕೆಟ್ ಗೆ ಮಾರ್ಟಿನ್ ಗುಪ್ಟಿಲ್ ಮತ್ತು ಹೆನ್ರಿ ನಿಕಲಸ್ ಉತ್ತಮ ಜತೆಯಾಟವಾಡಿದ್ದರು. ಆದರೆ ಈ ಜೋಡಿಯನ್ನು ಸ್ಪಿನ್ನರ್ ಯಜುವೇಂದ್ರ ಚಾಹಲ್ ಮುರಿದರು. ನಿಕಲಸ್ 41 ರನ್ ಗಳಿಸಿದ್ದಾಗ ಚಾಹಲ್ ಎಲ್ ಬಿ ಬಲೆಗೆ ಬಿದ್ದರು.
ಆದರೆ ಈ ತೀರ್ಪನ್ನು ಕೆಲ ಹೊತ್ತು ಪರಾಮರ್ಶೆ ನಡೆಸಿದ ನಂತರ ನಿಕಲಸ್ ಡಿಆರ್ ಎಸ್ ಗೆ ಮನವಿ ಸಲ್ಲಿಸಿದರು. ಅವಧಿ ಮುಗಿದ ಬಳಿಕ ನಿಕಲಸ್ ಡಿಆರ್ ಎಸ್ ಗೆ ಮನವಿ ಸಲ್ಲಿಸಿದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೆಂಗಣ್ಣಿಗೆ ಗುರಿಯಾಯಿತು. ಹೀಗಾಗಿ ಅವರು ಅಂಪಾಯರ್ ಜತೆ ಈ ಬಗ್ಗೆ ವಾಗ್ವಾದ ನಡೆಸಿದರು. ಹಾಗಿದ್ದರೂ ಡಿಆರ್ ಎಸ್ ನಲ್ಲಿ ನ್ಯೂಜಿಲೆಂಡ್ ಗೆ ಯಶಸ್ಸು ಸಿಗಲಿಲ್ಲ.