ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಾಳೆ ದ್ವಿತೀಯ ಏಕದಿನ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಸೋತರೆ ಸರಣಿ ಕಳೆದುಕೊಳ್ಳಲಿದೆ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನು ಸೋತಿರುವ ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲಬೇಕಾದರೆ ತನ್ನ ಬೌಲಿಂಗ್ ಮತ್ತು ಫೀಲ್ಡಿಂಗ್ ಸುಧಾರಿಸಿಕೊಳ್ಳಬೇಕಿದೆ. ಕಳೆದ ಪಂದ್ಯದಲ್ಲಿ ಬೆಟ್ಟದಷ್ಟು ರನ್ ಗಳಿಸಿದರೂ ಮಧ್ಯಮ ಓವರ್ ಗಳಲ್ಲಿ ಕಳಪೆ ಬೌಲಿಂಗ್ ಮತ್ತು ಫೀಲ್ಡಿಂಗ್ ನಿಂದಾಗಿ ಟೀಂ ಇಂಡಿಯಾ ಪಂದ್ಯ ಸೋಲಬೇಕಾಯಿತು.
ಈ ಪಂದ್ಯದಲ್ಲಿ ಆ ತಪ್ಪು ಮಾಡದೇ ಇರಲು ಕೊಹ್ಲಿ ತಮ್ಮ ತಂಡದಲ್ಲಿ ಕೆಲವು ಬದಲಾವಣೆ ಮಾಡುವ ಸಾಧ‍್ಯತೆಯಿಲ್ಲದಿಲ್ಲ. ಇಬ್ಬರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿಯುವುದು ಸೂಕ್ತ ಎಂಬ ಸಲಹೆಗಳು ಈಗಾಗಲೇ ಕೇಳಿಬರುತ್ತಿವೆ. ಬ್ಯಾಟಿಂಗ್ ನಲ್ಲಿ ಬದಲಾವಣೆ ಸಾಧ‍್ಯತೆಯಿಲ್ಲ. ಪಂದ್ಯ ನಾಳೆ ಕೂಡಾ ಬೆಳಿಗ್ಗೆ 7.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.