Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚೊಚ್ಚಲ ರಣಜಿ ಪ್ರಶಸ್ತಿ ಗರಿ ಮುಡಿಗೇರಿಸಿಕೊಂಡ ವಿದರ್ಭ

ಚೊಚ್ಚಲ ರಣಜಿ ಪ್ರಶಸ್ತಿ ಗರಿ ಮುಡಿಗೇರಿಸಿಕೊಂಡ ವಿದರ್ಭ

ramkrishna puranik

ಬೆಂಗಳೂರು , ಮಂಗಳವಾರ, 2 ಜನವರಿ 2018 (16:43 IST)
ಇಂದೋರ್: 61 ವರ್ಷಗಳ ನಂತರ ಮೊದಲ ಬಾರಿಗೆ ರಣಜಿ ಪ್ರಶಸ್ತಿ ಮುಡಿಗೇರಿಸಿಕೊಂಡ ವಿದರ್ಭ, ಪ್ರಶಸ್ತಿ ಗೆದ್ದ 18ನೇ ತಂಡವಾಗಿದೆ. ಹತ್ತು ವರ್ಷಗಳ ಬಳಿಕೆ ಚಾಂಪಿಯನ್ ಪಟ್ಟ ಏರುವ ದೆಹಲಿಯ ಕನಸನ್ನು ಚೂರು ಮಾಡಿತು ವಿದರ್ಭ.
84 ನೇ ಆವೃತ್ತಿಯ ರಣಜಿ ಪಂದ್ಯದಲ್ಲಿ ಅನುಭವಿ ಗೌತಮ್ ಗಂಭೀರ್ ಇರುವ ದೆಹಲಿ ತಂಡವನ್ನು ಸೋಲಿಸಿ, 84 ನೇ ಆವೃತ್ತಿಯಲ್ಲಿ ವಿದರ್ಭ ಚಾಂಪಿಯನ್ ಆಗಿ ಮೆರೆಯಿತು. ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 61 ವರ್ಷಗಳ ನಂತರ ವಿದರ್ಭ ಮೊದಲ ಬಾರಿಗೆ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಈ ಮಹೋನ್ನತ ಕ್ಷಣಕ್ಕಾಗಿ 10 ವರ್ಷಗಳ ನಂತರ ಮತ್ತು 8 ನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸನ್ನು ಕಂಡಿದ್ದ ದೆಹಲಿ ತಂಡವನ್ನು ಮಣಿಸಬೇಕಾಯಿತು.
 
ಕಳೆದ ಬಾರಿ ಅಂಕಪಟ್ಟಿಯಲ್ಲಿ ಎರಡು ಗೆಲುವಿನ ಮೂಲಕ ಕೊನೇಯ ಸ್ಥಾನವನ್ನು ಪಡೆದುಕೊಂಡಿದ್ದ ವಿದರ್ಭ ತಂಡ ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ದೆಹಲಿಯನ್ನು 9 ವಿಕೆಟ್‌ಗಳಿಂದ ಮಣಿಸಿತು. ಯುವ ಮತ್ತು ಜಾಫರ್‌ನಂತ ಅನುಭವಿ ಆಟಗಾರರನ್ನು ಒಳಗೊಂಡಿದ್ದ ವಿದರ್ಭ ತಂಡ ಚೊಚ್ಚಲ ಬಾರಿಗೆ ಸಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಲ್ಲದೇ ಚೊಚ್ಚಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಮೊದಲ ಇನ್ನಿಂಗ್ಸ್‌ನಿಂದಲೇ 252 ರನ್‌ಗಳ ಮುನ್ನಡೆ ಪಡೆದುಕೊಂಡಿದ್ದ ವಿದರ್ಭ ಗೆಲುವಿಗೆ ಮುನ್ನುಡಿ ಬರೆದಾಗಿತ್ತು. ತಿರುಗೇಟು ನೀಡುವ ವಿಶ್ವಾಸ ಹೊಂದಿದ್ದ ದೆಹಲಿ ತಂಡವನ್ನು ಚುರುಕ್ಕಾಗಿ ಶಿಸ್ತಿನ ಬೌಲಿಂಗ್ ಮೂಲಕ ಕಟ್ಟಿಹಾಕಿ 4ನೇ ದಿನಕ್ಕೆ ಪಂದ್ಯ ಗೆದ್ದು ಪ್ರಶಸ್ತಿಯನ್ನು ಪಡೆಯಿತು.
 
ಈ ಗೆಲುವಿನಲ್ಲಿ ಕನ್ನಡಿಗ ಗಣೇಶ್ ಸತೀಶ್ ಪಾಲು ಇದೆ. ಅವಕಾಶ ಅರಸಿ ವಿದರ್ಭ ತಂಡಕ್ಕೆ ಸೇರಿದ್ದ ಗಣೇಶ್ ಸತೀಶ್ ಈ ಆವೃತ್ತಿಯಲ್ಲಿ ಆಡಿದ 9 ಪಂದ್ಯಗಳಿಂದ 2 ಶತಕ, 3 ಅರ್ಧಶತಕ ಸೇರಿದಂತೆ 638 ರನ್ ಪೇರಿಸಿದ್ದರು. ಇದು ಅವರಿಗೆ 2ನೇ ರಣಜಿ ಪ್ರಶಸ್ತಿಯಾಗಿದೆ, ಮೊದಲ ಬಾರಿಗೆ 2013-14 ರ ಆವೃತ್ತಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಪ್ರಶಸ್ತಿ ಗೆದ್ದಿದ್ದರು.
 
ರಣಜಿ ಕ್ರಿಕೆಟ್ ಇತಿಹಾಸದಲ್ಲಿ ಹೆಚ್ಚು ಶತಕ ಮತ್ತು ರನ್ ಗಳಿಸಿದ ವಾಸಿಂ ಜಾಫರ್ ಅವರಿಗೆ ಇದು 9ನೇ ಪ್ರಶಸ್ತಿಯಾಗಿದ್ದು, ಅವರಿದ್ದ ತಂಡವು ಫೈನಲ್‌ಗೆ ಹೋಗಿ ಒಮ್ಮೆಯೂ ಸೋತಿಲ್ಲ, ಹೀಗಾಗಿ ಆಡಿದ 9 ರಣಜಿ ಫೈನಲ್‌ಗಳಲ್ಲಿಯೂ ಸೋಲಿಲ್ಲದ ಸರದಾರರಾಗಿದ್ದಾರೆ ಜಾಫರ್. ಅವರು ಈ ಫೈನಲ್ ಪಂದ್ಯದಲ್ಲಿ ಗೆಲುವಿನ ರನ್ ಬಾರಿಸಿದ್ದು ವಿಶೇಷವಾಗಿತ್ತು.
 
ಸಂಕ್ಷಿಪ್ತ ಸ್ಕೋರ್:
ದೆಹಲಿ: 295 ಮತ್ತು 280
ವಿದರ್ಭ: 547 ಮತ್ತು 32/1
 
ಫಲಿತಾಂಶ: ವಿದರ್ಭಕ್ಕೆ 9 ವಿಕೆಟ್‌ಗಳ ಜಯ ಮತ್ತು ರಣಜಿ ಪ್ರಶಸ್ತಿ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷದ ಮೊದಲ ದಿನದಂದೇ ಕೆಎಲ್ ರಾಹುಲ್ ಗೆ ಖುಲಾಯಿಸಿತು ಅದೃಷ್ಟ!