Publish Date: Thu, 09 Nov 2017 (17:07 IST)
Updated Date: Thu, 09 Nov 2017 (17:08 IST)
ಬೆಂಗಳೂರು: ದೆಹಲಿ ವಿರುದ್ಧ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಕಳೆದ ಪಂದ್ಯದಲ್ಲಿ ತ್ರಿಶತಕ ಗಳಿಸಿದ್ದ ಮಯಾಂಕ್ ಅಗರ್ವಾಲ್ ಈ ಪಂದ್ಯದಲ್ಲಿ ಶತಕ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮೊದಲ ದಿನದಂತ್ಯಕ್ಕೆ ಕರ್ನಾಟಕ 4 ವಿಕೆಟ್ ನಷ್ಟಕ್ಕೆ 348 ರನ್ ಗಳಿಸಿದೆ. ಮಯಾಂಕ್ 169 ರನ್ ಗಳಿಸಿ ಮತ್ತೊಂದು ದ್ವಿಶತಕದತ್ತ ದಾಪುಗಾಲಿಟ್ಟಿದ್ದಾರೆ . ರಾಷ್ಟ್ರೀಯ ತಂಡದಿಂದ ಮರಳಿದ ಕೆಎಲ್ ರಾಹುಲ್ ಕೇವಲ 5 ರನ್ ಗಳಿಸಿ ಔಟಾದರು.
ಆದರೆ ಮನೀಶ್ ಪಾಂಡೆ ಮಯಾಂಕ್ ಜತೆ ಉತ್ತಮ ಜತೆಯಾಟವಾಡಿರದಲ್ಲದೆ, ಅರ್ಧಶತಕ (74) ಗಳಿಸಿ ಔಟಾದರು. ಆರಂಭಿಕ ರವಿಕಾಂತ್ ಸಮರ್ಥ್ ಕೂಡಾ 58 ರನ್ ಗಳಿಸಿದರು. ದಿನದಂತ್ಯಕ್ಕೆ ಮಯಾಂಕ್ 169 ಹಾಗೂ ಸ್ಟುವರ್ಟ್ ಬಿನ್ನಿ 14 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ