Publish Date: Thu, 02 Apr 2020 (10:04 IST)
Updated Date: Thu, 02 Apr 2020 (10:05 IST)
ಮುಂಬೈ: 2011 ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಜಯಗಳಿಸಿ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆದ ದಿನವಿಂದು.
ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ನಡೆದ ವಿಶ್ವಕಪ್ ಸಮರದ ಫೈನಲ್ ಪಂದ್ಯ 2011 ರಲ್ಲಿ ಇದೇ ದಿನ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದಿತ್ತು.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಗೌತಮ್ ಗಂಭೀರ್, ಧೋನಿ ಸಾಹಸದಿಂದ ಲಂಕಾ ನೀಡಿದ್ದ 277 ರನ್ ಗಳ ಗುರಿ ಬೆನ್ನತ್ತಿ ಭಾರತ 6 ವಿಕೆಟ್ ಗಳಿಂದ ಫೈನಲ್ ಪಂದ್ಯ ಗೆದ್ದಿತ್ತು. ಇದಾಗಿ ಇಂದಿಗೆ 9 ವರ್ಷಗಳೇ ಕಳೆದಿವೆ. ಇದಾದ ಬಳಿಕ ಭಾರತ ಎರಡು ವಿಶ್ವಕಪ್ ಆಡಿದೆ. ಆದರೆ ಎರಡಲ್ಲೂ ಸೆಮಿಫೈನಲ್ ನಲ್ಲೇ ಮುಗ್ಗರಿಸಿದೆ.