Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೊಲೊಂಬೊ: ಟೀಂ ಇಂಡಿಯಾ ವಿರುದ್ಧ ನಾಲ್ಕೂ ಏಕದಿನ ಪಂದ್ಯಗಳನ್ನು ಸೋತು ಸುಣ್ಣವಾಗಿರುವ ಶ್ರೀಲಂಕಾಗೆ ಇಂದು ಕಡೆಯ ಅಗ್ನಿ ಪರೀಕ್ಷೆ. ಇಂದಿನ ಪಂದ್ಯದಲ್ಲಿ ಅದರ ವಿಶ್ವಕಪ್ ಭವಿಷ್ಯ ಅಡಗಿದೆ.
ಹಾಗಾಗಿ ಭಾರತದ ವಿರುದ್ಧ ಇಂದು ಗೆದ್ದರೆ ಮುಂಬರುವ ವಿಶ್ವಕಪ್ ಗೆ ನೇರ ಅರ್ಹತೆ ಗಳಿಸುವ ಆಸೆ ಇಟ್ಟುಕೊಳ್ಳಬಹುದು. ಸೋತರೆ ಅರ್ಹತಾ ಸುತ್ತಿನಲ್ಲಿ ಆಡಬೇಕಾಗುತ್ತದೆ.
ನೇರ ಅರ್ಹತೆ ಪಡೆಯಬೇಕಿದ್ದರೆ ಈ ಸರಣಿಯಲ್ಲಿ ಲಂಕಾ ಕನಿಷ್ಠ 2 ಪಂದ್ಯ ಗೆಲ್ಲಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಕನಿಷ್ಠ ಪಕ್ಷ ಇಂದಿನ ಪಂದ್ಯ ಗೆದ್ದರೆ, ವಿಂಡೀಸ್ ತಂಡ ಇಂಗ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ವಿರುದ್ಧ ಆಡಲಿರುವ ಏಕದಿನ ಸರಣಿಯಲ್ಲಿ ಸೋತರೆ ಲಂಕಾಗೆ ನೇರ ಪ್ರವೇಶದ ಅವಕಾಶ ಸಿಗಲಿದೆ. ಹಾಗಾಗಿ ಲಂಕಾ ಭವಿಷ್ಯ ಇಂದು ಟೀಂ ಇಂಡಿಯಾ ಕೈಯಲ್ಲಿ ನಿರ್ಧಾರವಾಗಲಿದೆ.