Publish Date: Mon, 16 Aug 2021 (16:46 IST)
Updated Date: Mon, 16 Aug 2021 (16:49 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಹೋರಾಟದ ಫಲವಾಗಿ ಟೀಂ ಇಂಡಿಯಾ ಪೈಪೋಟಿಕರ ಮೊತ್ತ ದಾಖಲಿಸಲು ಹೊರಟಿದೆ.
ದ್ವಿತೀಯ ಇನಿಂಗ್ಸ್ ನಲ್ಲಿ ಇತ್ತೀಚೆಗಿನ ವರದಿ ಬಂದಾಗ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿರುವ ಭಾರತ ಒಟ್ಟಾರೆ ಮುನ್ನಡೆಯನ್ನು 203 ರನ್ ಗೇರಿಸಿದೆ. ಇದೀಗ ಜಸ್ಪ್ರೀತ್ ಬುಮ್ರಾ 15, ಮೊಹಮ್ಮದ್ ಶಮಿ 13 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇದಕ್ಕೂ ಮೊದಲು ನಿನ್ನೆ ಅಜೇಯರಾಗಿದ್ದ ರಿಷಬ್ ಪಂತ್ 22 ರನ್ ಗೆ ಔಟಾದರು. ಇಶಾಂತ್ ಶರ್ಮಾ 16 ರನ್ ಗಳಿಸಿದರು. ಇದರಿಂದಾಗಿ ಭಾರತ 200 ರ ಗಡಿ ದಾಟಲು ಸಾಧ್ಯವಾಯಿತು. ಇಂದು ಪಂದ್ಯದ ಅಂತಿಮ ದಿನವಾಗಿದ್ದು, ಫಲಿತಾಂಶದ ಮೇಲೆ ಭಾರೀ ಕುತೂಹಲ ಮೂಡಿದೆ.