Publish Date: Mon, 16 Aug 2021 (10:46 IST)
Updated Date: Mon, 16 Aug 2021 (10:48 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಿತ್ತಾಟ ನಡೆಸಿದ್ದಾರೆ.
ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಆಂಡರ್ಸನ್ ಏನೋ ಹೇಳುವ ಮೂಲಕ ಕೆಣಕಿದ್ದಾರೆ. ಇದರಿಂದ ಕೆರಳಿದ ಕೊಹ್ಲಿ ಮತ್ತೆ ಮತ್ತೆ ನನ್ನ ಕೆಣಕುತ್ತಿದ್ದೀಯಾ? ಮೈದಾನ ನಿನ್ನ ಮನೆಯ ಹಿತ್ತಲಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಮತ್ತೆ ಕೊಹ್ಲಿ ವಯಸ್ಸಾದ ಮೇಲೆ ಎಲ್ಲರೂ ಹೀಗೆ ಕಿರಿ ಕಿರಿ ಹೇಳುತ್ತಲೇ ಇರುತ್ತಾರೆ ಎಂದು ಇಂಗ್ಲೆಂಡ್ ವೇಗಿಯನ್ನು ಕೆಣಕಿದ್ದಾರೆ.