Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಜ್ ಕೋಟ್: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟಿ20 ಪಂದ್ಯವನ್ನು 91 ರನ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿದೆ.
ಇದರೊಂದಿಗೆ ಟೀಂ ಇಂಡಿಯಾ ಒಂದೇ ತಂಡದ ವಿರುದ್ಧ ತಂಡವೊಂದು ಅತೀ ಹೆಚ್ಚು ಸರಣಿ ಗೆಲುವು ದಾಖಲಿಸಿದ ವಿಶ್ವದಾಖಲೆಯೊಂದನ್ನು ಮಾಡಿದೆ.
ಭಾರತ ನೀಡಿದ್ದ 229 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಲಂಕಾ 16.4 ಓವರ್ ಗಳಲ್ಲಿ 137 ರನ್ ಗಳಿಗೆ ಆಲೌಟ್ ಆಯಿತು. ಲಂಕಾ ಪರ ದಸುನ್ ಶಣಕ 23 ರನ್ ಗರಿಷ್ಠ ಗಳಿಕೆ. ಭಾರತದ ಪರ ಅರ್ಷ್ ದೀಪ್ ಸಿಂಗ್ 3, ಹಾರ್ದಿಕ್ ಪಾಂಡ್ಯ, ಉಮ್ರಾನ್ ಮಲಿಕ್, ಯಜುವೇಂದ್ರ ಚಾಹಲ್ ತಲಾ 2 ವಿಕೆಟ್ ಕಬಳಿಸಿದರೆ ಇನ್ನೊಂದು ವಿಕೆಟ್ ಅಕ್ಸರ್ ಪಟೇಲ್ ಪಾಲಾಯಿತು. ಈ ಪಂದ್ಯದಲ್ಲಿ ಶತಕ ಗಳಿಸಿದ್ದ ಸೂರ್ಯಕುಮಾರ್ ಯಾದವ್ ಪಂದ್ಯ ಶ್ರೇಷ್ಠ, ಅಕ್ಸರ್ ಪಟೇಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.